ನವದೆಹಲಿ: ಮೊನ್ನೆಯಷ್ಟೇ ಯೋಧರೊಬ್ಬರು ಹಿಮದ ಮಧ್ಯೆಯೇ ನಿಂತು ಗಡಿ ಕಾಯುತ್ತಿದ್ದ ದೃಶ್ಯ ಸಾಕಷ್ಟು ವೈರಲ್ ಆಗಿತ್ತು. ಇದೀಗ ಅದೇ ರೀತಿ ಮೈಕೊರೆವ ಚಳಿಯಲ್ಲಿ ಬಿರುಗಾಳಿಯಂತೆ ಬೀಳುವ ಹಿಮದ ಮಧ್ಯೆಯೇ ನಮ್ಮ ಭಾರತೀಯ ಯೋಧರು ವಾಲಿಬಾಲ್ ಆಡಿರುವ ದೃಶ್ಯ ಸಾಕಷ್ಟು ವೈರಲ್ ಆಗಿದೆ.
ಎಲ್ಲರೂ ಬೆಚ್ಚಗೆ ಹೊದ್ದು ಮಲಗುವಾಗ ದೇಶದ ಗಡಿ ಭಾಗದಲ್ಲಿ ಮೈಕೊರೆವ ಚಳಿ ಮಧ್ಯೆ ನಿಂತು ದಟ್ಟವಾಗಿ ಬೀಳುವ ಮಂಜಿಗೆ ಎದೆಗೊಟ್ಟು ನಿಂತು ದೇಶ ರಕ್ಷಣೆ ಮಾಡುವ ಯೋಧರ ಕಾರ್ಯವನ್ನು ಎಷ್ಟು ಹೊಗಳಿದರೂ ಸಾಲದು.
ತಮ್ಮ ಕೆಲಸದ ಒತ್ತಡ ಮಧ್ಯೆಯೂ ಯೋಧರು ಹಿಮದಲ್ಲೇ ಕೆಲ ಕಾಲ ಆಟವಾಡಿ ಸಮಯ ಕಳೆದಿದ್ದಾರೆ. ಜಮ್ಮು, ಕಾಶ್ಮೀರದ ಗಡಿ ಭಾಗದಲ್ಲಿ ಯೋಧರು ಈ ರೀತಿ ಆಟವಾಡಿ ಖುಷಿಪಟ್ಟಿದ್ದಾರೆ.
PublicNext
10/01/2022 10:28 pm