ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸೇರಿದಂತೆ 12 ಮಂದಿ ಕ್ರೀಡಾಪಟುಗಳಿಗೆ 2021ನೇ ಸಾಲಿನ ಪ್ರತಿಷ್ಠಿತ ಮೇಜರ್ ಧ್ಯಾನ್ಚಂದ್ ಖೇಲ್ ರತ್ನ ಪ್ರಶಸ್ತಿ ಘೋಷಿಸಲಾಗಿದೆ.
ಹಾಗೆಯೇ ಕ್ರಿಕೆಟಿಗ ಶಿಖರ್ ಧವನ್ ಸೇರಿದಂತೆ 35 ಆಟಗಾರರಿಗೆ ಅರ್ಜುನ ಪ್ರಶಸ್ತಿಯನ್ನು ನವೆಂಬರ್ 13 ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಕ್ರೀಡಾಪಟುಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ಖೇಲ್ ರತ್ನ ಪ್ರಶಸ್ತಿ ಗೌರವಕ್ಕೆ ಆಯ್ಕೆಯಾದ ಕ್ರೀಡಾಪಟುಗಳ ಪಟ್ಟಿ ಹೀಗಿದೆ:
ನೀರಜ್ ಚೋಪ್ರಾ(ಅಥ್ಲೆಟಿಕ್ಸ್)
ರವಿ ದಹಿಯಾ(ಕುಸ್ತಿ)
ಪಿ.ಆರ್ ಶ್ರೀಜೇಶ್(ಹಾಕಿ)
ಲೊವ್ಲಿನಾ ಬೊರ್ಗೊಹೈ(ಬಾಕ್ಸಿಂಗ್)
ಸುನಿಲ್ ಚೆಟ್ರಿ (ಫುಟ್ಬಾಲ್)
ಮಿಥಾಲಿ ರಾಜ್(ಕ್ರಿಕೆಟ್)
ಪ್ರಮೋದ್ ಭಗತ್(ಬ್ಯಾಡ್ಮಿಂಟನ್)
ಸುಮಿತ್ ಆಂಟಿಲ್(ಜಾವ್ಲಿನ್)
ಅವನಿ ಲೇಖರ(ಶೂಟಿಂಗ್)
ಕೃಷ್ಣ ನಗರ್(ಬ್ಯಾಡ್ಮಿಂಟನ್)
ನರ್ವಾಲ್(ಶೂಟಿಂಗ್)
ಮನ್‌ಪ್ರೀತ್ ಸಿಂಗ್(ಹಾಕಿ)
* 35 ಮಂದಿಗೆ ಅರ್ಜುನ: ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಬ್ಯಾಡ್ಮಿಂಟನ್ ನಲ್ಲಿ ಪದಕ ಜಯಿಸಿದ್ದ ಐಎಎಸ್ ಅಧಿಕಾರಿ, ಕರ್ನಾಟಕದ ಸುಹಾಸ್ ಯತೀರಾಜ್ ಹಾಗೂ ಕ್ರಿಕೆಟಿಗ ಶಿಖರ್ ಧವನ್ ಸೇರಿದಂತೆ 35 ಮಂದಿಗೆ ಅರ್ಜುನ ಪ್ರಶಸ್ತಿ ಘೋಷಿಸಲಾಗಿದೆ.
PublicNext
02/11/2021 10:56 pm