ಟೋಕಿಯೊ : ಕೆರಿಬಿಯನ್ ದ್ವೀಪದಲ್ಲಿ ಶನಿವಾರ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಕನಿಷ್ಠ 304ರಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ. ಸದ್ಯ ಸಂಕಷ್ಟದಲ್ಲಿರುವ ಇವರ ನೆರವಿಗೆ ಮುಂದಾದ ನಾಲ್ಕು ಗ್ರ್ಯಾನ್ ಸ್ಲಾಮ್ ಗಳ ಒಡತಿ, ಜಪಾನಿನ ನವೋಮಿ ಒಸಾಕಾ ಮತ್ತೂಮ್ಮೆ ಸುದ್ದಿಯಾಗಿದ್ದಾರೆ.
ಮುಂದಿನ ವಾರ ನಡೆಯುವ “ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್’ ಟೆನಿಸ್ ಪಂದ್ಯಾವಳಿಯಲ್ಲಿ ತನಗೆ ಲಭಿಸುವ ಎಲ್ಲ ಮೊತ್ತವನ್ನು ಹೈಟಿ ಭೂಕಂಪ ಸಂತ್ರಸ್ತರಿಗೆ ನೀಡುವುದಾಗಿ ಒಸಾಕಾ ಹೇಳಿದ್ದಾರೆ.
PublicNext
15/08/2021 11:01 pm