ಮಡಿಕೇರಿ : ಸಾವು ಎಲ್ಲಿ ಹೇಗೆ ಬರುತ್ತದೆಯೋ ಗೊತ್ತಿಲ್ಲ. ಸದ್ಯ ಯುವ ಹಾಕಿ ಆಟಗಾರನೊಬ್ಬ ಮೈದಾನದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಕೊಡಗಿನಲ್ಲಿ ನಡೆದಿದೆ. ಇಲ್ಲಿನ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದಲ್ಲಿ ಕೊಡವ ಕುಟುಂಬಗಳ ಮಧ್ಯೆ ಹಾಕಿ ಪಂದ್ಯಾವಳಿ ನಡೆಯುತ್ತಿತ್ತು. ಈ ಪಂದ್ಯಾವಳಿಯಲ್ಲಿ 22 ವರ್ಷದ ತೊತ್ತಿಯಂಡ ಸೋಮಯ್ಯ ಎಂಬ ಯುವಕ ತಮ್ಮ ಕುಟುಂಬದ ಪರವಾಗಿ ಆಡುತ್ತಿದ್ದರು.
ಪಂದ್ಯಾಟದ ಮಧ್ಯೆ ಇದ್ದಕ್ಕಿದ್ದಂತೆ ಸೋಮಯ್ಯ ಕುಸಿದು ಬಿದ್ದಿದ್ದಾರೆ. ಮೈದಾನದಲ್ಲಿ ಕುಸಿದು ಬಿದ್ದ ಸೋಮಯ್ಯರನ್ನು ತಕ್ಷಣವೇ ಮಡಿಕೇರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ. ಕೊಡಗಿನಲ್ಲಿ ಹಾಕಿಗೆ ತನ್ನದೇ ಆದ ಮಹತ್ವವಿದೆ. ಕೊಡವರ ಹಾಕಿಗೆ ದೊಡ್ಡ ಇತಿಹಾಸವಿದೆ. ಅಂತದ್ದರಲ್ಲಿ ಯುವ ಆಟಗಾರ ಕೇವಲ 22 ವರ್ಷದ ಯುವಕ ಮೈದಾನದಲ್ಲೇ ಉಸಿರು ಚೆಲ್ಲಿರುವುದು ಕೊಡಗಿನ ಹಾಕಿ ಆಟಗಾರರು, ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿದೆ.
PublicNext
25/12/2021 06:51 pm