ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೃದಯಾಘಾತ : ಖ್ಯಾತ ಕ್ರಿಕೆಟ್ ಅಂಪೈರ್ ಇನ್ನಿಲ್ಲ

ಐಸಿಸಿ ಮಾಜಿ ಅಂಪೈರ್ ಅಸಾದ್ ರವೂಫ್ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಅಂದ್ಹಾಗೆ ಅಸಾದ್ 1998 ರಿಂದ ಫಸ್ಟ್ ಕ್ಲಾಸ್ ಕ್ರಿಕೆಟ್ ನಲ್ಲಿ ಅಂಪೈರಿಂಗ್ ಮಾಡಲು ಶುರುಮಾಡಿದ್ದರು. ನಂತರ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅವರನ್ನ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಗೆ ಅಂಪೈರ್ ಆಗಿ ನೇಮಕ ಮಾಡಿಕೊಂಡಿದ್ದರು. ಫೆಬ್ರವರಿ 16, 2000ರಲ್ಲಿ ನಡೆದ ಪಾಕಿಸ್ತಾನ-ಶ್ರೀಲಂಕಾ ಪಂದ್ಯವನ್ನ ಇವರು ಆಡಿಸಿದ್ದರು.

ಅಂತರ 2004ರಲ್ಲಿ ಅಂತಾರಾಷ್ಟ್ರೀಯ ಪ್ಯಾನಲ್ ಗೆ ಮೊದಲ ಬಾರಿಗೆ ಆಯ್ಕೆ ಆಗಿದ್ದರು. ಅದಾದ ನಂತರ 2005ರಲ್ಲಿ ಐಸಿಸಿ ಟೆಸ್ಟ್ ಪಂದ್ಯಗಳಿಗೂ ಅವಕಾಶ ಮಾಡಿಕೊಟ್ಟಿತ್ತು. 47 ಟೆಸ್ಟ್, 98 ಏಕದಿನ ಸರಣಿ ಹಾಗೂ 23 ಟಿ-20 ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ ಹೆಗ್ಗಳಿಕೆ ಇವರಿಗಿದೆ.ಅಸಾದ್ 1956, ಮೇ 12 ರಂದು ಪಾಕಿಸ್ತಾನದಲ್ಲಿ ಜನಿಸಿದ್ದರು. 2006 ರಿಂದ 2013ವರೆಗೆ ಐಸಿಸಿ ಅಂಪೈರ್ ಆಗಿಯೂ ಸೇವೆ ಸಲ್ಲಿಸಿದ್ದರು.

ಮ್ಯಾಚ್ ಫಿಕ್ಸಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ಇವರನ್ನು ಬಿಸಿಸಿಐ 2016ರಿಂದ ಐದು ವರ್ಷಗಳವರೆಗೆ ಬ್ಯಾನ್ ಮಾಡಿತ್ತು.

Edited By : Nirmala Aralikatti
PublicNext

PublicNext

15/09/2022 07:53 am

Cinque Terre

48.43 K

Cinque Terre

5