ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಮಾ ದಾಸ್ ಗೆ ಕೋವಿಡ್ ಪಾಸಿಟಿವ್

ನವದೆಹಲಿ: ಭಾರತದ ಸ್ಟಾರ್ ಮಹಿಳಾ ಅಥ್ಲೀಟ್ ಹಿಮಾ ದಾಸ್ಗೆ ಕೊರೊನಾ ದೃಢಪಟ್ಟಿದೆ. ಟ್ವೀಟ್ ಮೂಲಕ ಅವರು ಸ್ವತಃ ಹಿಮಾ ವಿಷಯ ಹಂಚಿಕೊಂಡಿದ್ದಾರೆ. ಸದ್ಯ ಪ್ರತ್ಯೇಕವಾಸದಲ್ಲಿದ್ದು ಯಾವುದೇ ಸಮಸ್ಯೆಗಳಿಲ್ಲ ಎಂದಿದ್ದಾರೆ. 21 ವರ್ಷದ ಹಿಮಾ ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಇಚೆಗೆ ಆರಂಭಗೊಂಡಿರುವ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿದ್ದರು. 'ಪ್ರತ್ಯೇಕವಾಸದ ಸಂದರ್ಭವನ್ನು ವಿಶ್ರಾಂತಿಗಾಗಿ ಬಳಸಿಕೊಳ್ಳಲಿದ್ದೇನೆ. ಇನ್ನಷ್ಟು ಬಲಶಾಲಿಯಾಗಿ ಟ್ರ್ಯಾಕ್ ಗೆ ಇಳಿಯಲು ಇದು ನೆರವಾಗಲಿದೆ. ಎಲ್ಲರೂ ಮಾಸ್ಕ್ ಧರಿಸಿ, ಸುರಕ್ಷಿತವಾಗಿರಿ' ಎಂದು ಅವರು ಟ್ವೀಟ್ ಮಾಡಿದ್ದಾರೆ.

2018ರಲ್ಲಿ ನಡೆದ 20 ವರ್ಷದೊಳಗಿನವರ ವಿಶ್ವ ಚಾಂಪಿಯನ್ಷಿಪ್ ನ 400 ಮೀಟರ್ಸ್ ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ಹಿಮಾ ದಾಸ್ ಅವರು ವಿಶ್ವ ಚಾಂಪಿಯನ್ ಆದ ಭಾರತದ ಮೊದಲ ಸ್ಪ್ರಿಂಟರ್ ಎನಿಸಿಕೊಂಡಿದ್ದರು.

Edited By : Nirmala Aralikatti
PublicNext

PublicNext

13/10/2021 07:41 pm

Cinque Terre

82.12 K

Cinque Terre

0