ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್‌ಗೆ ಕೊರೊನಾ ಕಾಟ: ಹೈದರಾಬಾದ್ ಟೀಂ ಆಟಗಾರ ನಟರಾಜನ್‌ಗೆ ಸೋಂಕು

ದುಬೈ: ಕೊರೊನಾ ಎರಡನೇ ಅಲೆ ಪರಿಣಾಮ ಐಪಿಎಲ್ ಟೂರ್ನಿ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಈಗ ದುಬೈನಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿದೆ. ಆದ್ರೆ ಅಲ್ಲಿಯೂ ಟೂರ್ನಿಗೆ ಕೊರೊನಾ ಬಾಧೆ ಕಾಡುತ್ತಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ನಟರಾಜನ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಅವರ ಸಂಪರ್ಕಕ್ಕೆ ಬಂದ ಇತರ ಆರು ಆಟಗಾರರ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಇಂದು ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ಪಂದ್ಯ ನಡೆಯಬೇಕಿತ್ತು. ಆದರೆ ನಟರಾಜನ್ ಗೆ ಕೊರೋನಾ ಪಾಸಿಟಿವ್ ಬಂದಿರುವುದರಿಂದ ಪಂದ್ಯ ನಡೆಯುವುದು ಅನುಮಾನವಾಗಿದೆ. ಇನ್ನು ಹೈದರಾಬಾದ್ ಆಟಗಾರರು ಮತ್ತು ಸಿಬ್ಬಂದಿಯ ಆರ್ ಟಿಪಿಸಿಆರ್ ವರದಿ ಬಂದ ನಂತರ ಪಂದ್ಯ ನಡೆಯಬೇಕಾ ಅಥವಾ ಮುಂದೂಡುವ ಬಗ್ಗೆ ಸ್ಪಷ್ಟನೆ ಸಿಗಲಿದೆ.

Edited By : Nagaraj Tulugeri
PublicNext

PublicNext

22/09/2021 05:55 pm

Cinque Terre

44.51 K

Cinque Terre

1

ಸಂಬಂಧಿತ ಸುದ್ದಿ