ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಣಾಲ್ ಪ್ರಾಥಮಿಕ ಸಂಪರ್ಕಿತರ ಕೊರೊನಾ ವರದಿ ನೆಗೆಟಿವ್: ಟಿ20 ಸರಣಿ ಹಾದಿ ಸುಗಮ

ಕೊಲಂಬೋ: ಟೀಂ ಇಂಡಿಯಾ ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಟಿ20 ಸರಣಿಗೆ ಸಂಕಷ್ಟ ತರಲಿದೆ ಎನ್ನಲಾಗಿತ್ತು. ಆದರೆ ಕೃಣಾಲ್ ಪ್ರಾಥಮಿಕ ಸಂಪರ್ಕಿತರ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದು ಟಿ20 ಸರಣಿ ಹಾದಿಯನ್ನು ಸುಗಮಗೊಳಿಸಿದೆ.

ಕೊಲಂಬೋದಲ್ಲಿ ಭಾರತ–ಶ್ರೀಲಂಕಾ ನಡುವಣ ಎರಡನೇ ಟಿ–20 ಪಂದ್ಯ ಇಂದು ನಡೆಯುವುದು ಬಹುತೇಕ ಖಚಿತವಾಗಿದೆ. ನಿನ್ನೆ ಬೆಳಿಗ್ಗೆಯಿಂದಲೇ ಕೃಣಾಲ್ ಪಾಂಡ್ಯ ಅವರಿಗೆ ಮೂಗು ಸೋರುವಿಕೆ ಸೇರಿದಂತೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ್ಯಂಟಿಜೆನ್ ಮತ್ತು ಆರ್‌ಟಿಪಿಸಿಆರ್ ಎರಡೂ ಪರೀಕ್ಷೆಗಳಲ್ಲಿ ಪಾಸಿಟಿವ್ ಬಂದಿತ್ತು. ಹೀಗಾಗಿ ಮಂಗಳವಾರ ಒಂದು ದಿನದ ಮಟ್ಟಿಗೆ ಪಂದ್ಯವನ್ನು ಮುಂದೂಡಲಾಗಿತ್ತು. ತಂಡದ ಸದಸ್ಯರನ್ನು ಕ್ವಾರಂಟೈನ್‌ನಲ್ಲಿ ಇರಿಸಿ 8 ಮಂದಿ ಪ್ರಾಥಮಿಕ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಅವರ ಕೋವಿಡ್ ವರದಿಗಳು ನೆಗೆಟಿವ್ ಬಂದಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ. ಆದರೆ ಸಂಪರ್ಕಿತರ ಹೆಸರನ್ನು ಬಹಿರಂಗಪಡಿಸಲು ಬಿಸಿಸಿಐ ನಿರಾಕರಿಸಿರುವುದಾಗಿ ಅದು ಹೇಳಿದೆ.

Edited By : Vijay Kumar
PublicNext

PublicNext

28/07/2021 08:26 am

Cinque Terre

42.67 K

Cinque Terre

0