ನವದೆಹಲಿ : ಟೋಕಿಯೊ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ಗಣರಾಜೋತ್ಸವದ ದಿನದಂದು ಪರಮ ವಿಶಿಷ್ಟ ಸೇವಾ ಪದಕ ನೀಡಲಾಗುವುದು. ರಾಷ್ಟ್ರಪತಿ ರಾಮನಾಥ ಕೋವಿಂದ್ ಈ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ನೀರಜ್ ಚೋಪ್ರಾ ಅವರು ಸೇನೆಯಲ್ಲಿ ಸುಬೇದಾರ್ ಆಗಿದ್ದು, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನಂತರ ಅವರಿಗೆ ಈ ಗೌರವವನ್ನು ನೀಡಲಾಗುತ್ತಿದೆ.
ಪರಮ ವಿಶಿಷ್ಟ ಸೇವಾ ಪದಕ (PVSM) ಭಾರತದ ಮಿಲಿಟರಿ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು 1960 ರಲ್ಲಿ ಸ್ಥಾಪಿಸಲಾಯಿತು. ಶಾಂತಿ ಮತ್ತು ಸೇವಾ ವಲಯದಲ್ಲಿನ ಅತ್ಯಂತ ಅಸಾಧಾರಣ ಕೆಲಸಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ನೀರಜ್ ಚೋಪ್ರಾ ಅವರನ್ನು 4 ರಜಪೂತ್ ರೈಫಲ್ಸ್ ನಲ್ಲಿ ಸುಬೇದಾರ್ ಆಗಿ ಪೋಸ್ಟ್ ಮಾಡಲಾಗಿದೆ. ಸೇನೆಯಲ್ಲಿದ್ದಾಗ ಈ ಅಥ್ಲೀಟ್ ಉತ್ತಮ ಪ್ರದರ್ಶನ ನೀಡಿದ್ದು, ಅದಕ್ಕೆ ವಿಶಿಷ್ಟ ಸೇವಾ ಪದಕ ಲಭಿಸಿದ್ದು, ಇದೀಗ ಪರಮ ವಿಶಿಷ್ಟ ಸೇವಾ ಪದಕ ಪಡೆಯಲಿದ್ದಾರೆ.
PublicNext
25/01/2022 09:09 pm