ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್- ಇಂದಿನ ಪಂದ್ಯದಲ್ಲಿ ಎಂಎಸ್‌ಡಿ ಮೂರು ಮೈಲಿಗಲ್ಲು ಸೃಷ್ಟಿ!

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್‌.ಧೋನಿ ಕ್ರಿಕೆಟ್ ಇತಿಹಾಸದಲ್ಲಿ ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರವಾಗಿದೆ. ಅಂತೆ ಇಂದಿನ ಪಂದ್ಯದಲ್ಲೂ ಮೂರು ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆಗಳನ್ನು ಧೋನಿ ಹೊಂದಿದ್ದಾರೆ.

ಹೌದು. ಎಂ.ಎಸ್.ಧೋನಿ ಒಟ್ಟು 295 ಸಿಕ್ಸರ್‌ಗಳನ್ನು ಸಿಡಿಸಿದ್ದು, 300 ಗಡಿ ತಲುಪಲು ಅವರಿಗೆ ಕೇವಲ 5 ಸಿಕ್ಸರ್‌ ಗಳು ಮಾತ್ರ ಬೇಕಿದೆ. ಈ ಮೂಲಕ 300 ಸಿಕ್ಸರ್ ಸಿಡಿಸಿದ ಮೈಲಿಗಲ್ಲು ನಿರ್ಮಿಸಲಿದ್ದಾರೆ. ಈ ಸಾಧನೆಯಲ್ಲಿ ಭಾರತೀಯ ಆಟಗಾರರಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದರೆ, ಸುರೇಶ್ ರೈನಾ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಇಬ್ಬರು ಕ್ರಮವಾಗಿ 361 ಸಿಕ್ಸರ್ ಹಾಗೂ 311 ಸಿಕ್ಸರ್ ಸಿಡಿಸಿದ್ದಾರೆ.

ಐಪಿಎಲ್‌ನಲ್ಲಿ 100 ಕ್ಯಾಚ್‌ಗಳನ್ನು ಹಿಡಿದ ಸಾಧನೆ ಮಾಡಲು ಧೋನಿಗೆ ಕೇವಲ ಒಂದು ಕ್ಯಾಚ್‌ಗಳ ಅಗತ್ಯವಿದೆ. ಮೂರು ಕ್ಯಾಚ್‌ಗಳನ್ನು ಹಿಡಿದರೆ ಸುರೇಶ್ ರೈನಾ ಅವರನ್ನು (102 ಕ್ಯಾಚ್‌) ಹಿಂದಿಕ್ಕಲಿದ್ದಾರೆ. ಈ ಮೂಲಕ ಟಿ20 ಲೀಗ್‌ನಲ್ಲಿ ಹೆಚ್ಚು ಕ್ಯಾಚ್‌ಗಳನ್ನು ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ದಿನೇಶ್ ಕಾರ್ತಿಕ್ ಅವರ ಹಿಂದೆ ಧೋನಿ ಇರಲಿದ್ದಾರೆ.

ವಿಕೆಟ್ ಕೀಪರ್ ಆಗಿ ಧೋನಿ ಅವರ ಹೆಸರಿನಲ್ಲಿ 96 ಕ್ಯಾಚ್‌ಗಳಿವೆ. ಐಪಿಎಲ್‌ನಲ್ಲಿ 101 ಕ್ಯಾಚ್‌ಗಳನ್ನು ವಿಕೆಟ್ ಕೀಪರ್ ಆಗಿ ತೆಗೆದುಕೊಂಡ ಕಾರ್ತಿಕ್ ಅವರನ್ನು ಹಿಂದಿಕ್ಕಲು ಧೋನಿಗೆ ಆರು ಕ್ಯಾಚ್‌ಗಳ ಅಗತ್ಯವಿದೆ.

Edited By : Vijay Kumar
PublicNext

PublicNext

22/09/2020 03:45 pm

Cinque Terre

107.65 K

Cinque Terre

8

ಸಂಬಂಧಿತ ಸುದ್ದಿ