ಬೆಂಗಳೂರು : ಐಪಿಎಲ್ ಹಬ್ಬ ಆರಂಭಕ್ಕೂ ಮೊದಲೇ ಈಗಾಗಲೇ ಐಪಿಎಲ್ 13ನೇ ಆವೃತ್ತಿಗೆ ಪೂರ್ವಭಾವಿ ಎಂಬಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳನ್ನ ಸೆಳೆಯಲು ವಿಶೇಷ ಹಾಡೊಂದನ್ನ ನಿನ್ನೆ ತಾನೇ ಬಿಡುಗಡೆಗೊಳಿಸಿದೆ.
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಯಜುವೇಂದ್ರ ಚಾಹಲ್ ಮತ್ತು ಸ್ಥಳೀಯ ಆಟಗಾರ ಪವನ್ ದೇಶಪಾಂಡೆ ಈ ಹಾಡಿನಲ್ಲಿ ಕಾಣಿಸಿದ್ದ ಈ ಹಾಡು ಈಗ ವಿವಾದಕ್ಕೆ ಕಾರಣವಾಗಿದೆ.
ಅಭಿಮಾನಿಗಳನ್ನೇ ತಂಡದ 12ನೇ ಎಂದು ಪರಿಗಣಿಸಿರುವ ಆರ್ಸಿಬಿ ಈ ಹಾಡನ್ನು ಅಭಿಮಾನಿಗಳಿಗೆ ಸಮರ್ಪಿಸಿದ್ದು ಈದೀಗ ಫ್ಯಾನ್ಸ್ ಈ ಹಾಡಿನ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಕಾರಣ ಎನಂದ್ರೇ ? ಹಾಡಿನಲ್ಲಿ ಒಳಗಿರುವ ಹಿಂದಿ ಹೇರಿಕೆ ಇದರಿಂದ ಟೂರ್ನಿಗೆ ಮೊದಲೇ ಆರ್ಸಿಬಿ ತಂಡ ತನ್ನ ಅಭಿಮಾನಿಗಳ ಮನಸ್ಸಿಗೆ ಬೇಸರ ಮಾಡಿದೆ.
‘ಏನೇ ಬರಲಿ… ಎಂತೇ ಇರಲಿ..’ ಕನ್ನಡದಲ್ಲಿಯೇ ಆರಂಭವಾದ ಹಾಡಿನಲ್ಲಿ ಹಿಂದಿ ಸಾಹಿತ್ಯದ ಬಳಕೆ ಹೆಚ್ಚಾಗಿರುವುದು ಕನ್ನಡ ಪ್ರೇಮಿಗಳನ್ನು ಕೋಪಕ್ಕೆ ಆರ್ಸಿಬಿ ಕರ್ನಾಟಕದ ತಂಡವಾಗಿದೆ ಹಾಡಿನಲ್ಲಿ ಕನ್ನಡ ಬಳಸಿ, ಇಲ್ಲಾ ತಂಡದ ಹೆಸರಿನಿಂದ ಬೆಂಗಳೂರು ಪದವನ್ನು ಕೈಬಿಡಿ ಎಂದು ಅಭಿಮಾನಿಗಳು ಆರ್ಸಿಬಿ ವಿರುದ್ಧ ಕೋಪಗೊಂಡಿದ್ದಾರೆ.
ರ್ಯಾಪ್ ಎಂದು ಹೇಳುವ ಈ ಹಾಡಿನಲ್ಲಿ ಕನ್ನಡ ರಪ್ ಅಂತ ಬಂದು ಹೋಗುತ್ತಷ್ಟೇ ಕನ್ನಡ ಪ್ರೇಮಿಗಳು ಕಿಡಿ ಕಾರಿದ್ದು ಆರ್ಸಿಬಿ ಕನ್ನಡ ನಾಡಿನ ತಂಡ ಹಾಡಿನಲ್ಲಿ ಹಿಂದಿ ಬಳಕೆಯ ಅಗತ್ಯ ಏಕೆ ? ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓಕರ್ನಾಟಕದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಆರ್ಸಿಬಿ ಹಾಡು ಚೆನ್ನಾಗಿದೆ. ಆದರೆ ಹಿಂದಿ ಬದಲಾಗಿ ಸಂಪೂರ್ಣ ಕನ್ನಡವನ್ನೇ ಬಳಸಿಕೊಂಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಟ್ವೀಟ್ ಮಾಡಿದ್ದಾರೆ. ಚೆನ್ನೈ ಸೂಪರ್ಕಿಂಗ್ಸ್ ತಂಡ ಯಾವಾಗಲೂ ತಮಿಳುನಾಡಿನ ಸ್ಥಳೀಯ ಜನರ ಭಾವನೆಗಳಿಗೆ ಬೆಲ ನೀಡುತ್ತದೆ. ಆದರೆ ಆರ್ಸಿಬಿ ತಂಡ ಯಾಕೆ ಸ್ಥಳೀಯರ ಭಾವನೆಗಳಿಗೆ ಬೆಲೆ ನೀಡುತ್ತಿಲ್ಲ. ನಾವು ಹಾಡಿನಲ್ಲಿ ಕನ್ನಡದ ಬಳಕೆಯನ್ನಷ್ಟೇ ಕೇಳುತ್ತಿದ್ದೇವೆ. ಯಾಕೆಂದರೆ ಬೆಂಗಳೂರಿನ ಭಾಷೆ ಕನ್ನಡ ಎಂದೂ ದೊಡ್ಡ ಗಣೇಶ್ ಅವರು ಹಿಂದಿ ಹೇರಿಕೆಯನ್ನು ವಿರೋಧಿಸಿದ್ದಾರೆ.
ಅಭಿಮಾನಿಗಳ ತೀವ್ರ ಟೀಕೆಗಳ ನಂತರ ಆರ್ಸಿಬಿ ಹಾಡಿನಲ್ಲಿ ಸ್ವಲ್ಪ ಬದಲಾವಣೆ ಮಾಡಿ ಮತ್ತೊಂದು ವಿಡಿಯೋ ಹರಿ ಬಿಟ್ಟಿದೆ.
PublicNext
19/09/2020 10:30 am