ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

4 ಪಂದ್ಯಗಳಲ್ಲಿ 3 ಅರ್ಧಶತಕ: ಕನ್ನಡಿಗ ಪಡಿಕ್ಕಲ್ ಬ್ಯಾಟಿಂಗ್‌ಗೆ ವಿರಾಟ್ ಫಿದಾ

ದುಬೈ: ಐಪಿಎಲ್ 13ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಆರಂಭ ಪಡೆದುಕೊಂಡಿದ್ದು, ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ದಾಖಲಿಸಿದರೆ, ಕೇವಲ ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಆರ್​ಸಿಬಿಯ ಈ ಗೆಲುವಿನ ಓಟದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಪಾತ್ರ ಬಹು ಮುಖ್ಯವಾಗಿದೆ.

ಪಡಿಕ್ಕಲ್ ಆಡಿದ 4 ಪಂದ್ಯಗಳಲ್ಲಿ ಮೂರು ಅರ್ಧಶತಕ ಸಿಡಿಸಿ ಬ್ಯಾಟಿಂಗ್‌ ಪಡೆಗೆ ಬಲ ನೀಡಿದ್ದಾರೆ. ಆರಂಭಿಕನಾಗಿ ಮೈದಾನಕ್ಕೆ ಇಳಿದು ತಂಡಕ್ಕೆ ಆಸರೆಯಾಗುತ್ತಿರುವ ಪಡಿಕ್ಕಲ್ ಅವರ ಆಟ ಕಂಡು ಸ್ವತಃ ವಿರಾಟ್ ಕೊಹ್ಲಿ ಫಿದಾ ಆಗಿದ್ದಾರೆ. ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ದೇವದತ್ ಅವರು ಕೇವಲ 34 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ಸದ್ಯ ಐಪಿಎಲ್ 2020 ಟೂರ್ನಿಯಲ್ಲಿ ಒಟ್ಟು 174 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನಾಯಕ ವಿರಾಟ್‌, ಪಡಿಕ್ಕಲ್ ಅವರ ಆಟ ಕಂಡು ಅದ್ಭುತವಾಗಿ ಆಡುತ್ತಿದ್ದಾನೆ ಎಂದು ಸೈಮ್ ಬಳಿ ಹೇಳಿದ್ದೆ. ಆತನಲ್ಲಿ ಗಂಭೀರ ರೀತಿಯ ಪ್ರತಿಭೆ ಅಡಗಿದೆ. ಚೆಂಡಿನ ಹತ್ತಿರ ಸುಲಭವಾಗಿ ತಲುಪುತ್ತಾರೆ. ಅಷ್ಟೇ ಉತ್ತಮವಾಗಿ ಆಡುತ್ತಾರೆ ಕೂಡ. ಅವರ ಎಲ್ಲಾ ಹೊಡೆತಗಳೂ ಪರಿಪೂರ್ಣವಾಗಿರುತ್ತದೆ. ಅಪಾಯ ತೆಗೆದುಕೊಂಡು ಯಾವುದೇ ಹೊಡೆತಗಳನ್ನು ಆಡುವುದಿಲ್ಲ ಎಂದು ಹೊಗಳಿದ್ದಾರೆ.

Edited By : Vijay Kumar
PublicNext

PublicNext

04/10/2020 02:09 pm

Cinque Terre

33.09 K

Cinque Terre

0

ಸಂಬಂಧಿತ ಸುದ್ದಿ