ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಬಾರಿಯ ಐಪಿಎಲ್ ನಿರೂಪಣೆಯಿಂದ ಹಿಂದೆ ಸರಿದ ಮಯಂತಿ ಲ್ಯಾಂಗರ್ ಕಾರಣ ಎನ್ ಗೊತ್ತಾ?

ಬೆಂಗಳೂರು : ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಐಪಿಎಲ್ ಟೂರ್ನಿಯ ನಡೆಯಲಿದೆ.

ಆದರೆ ಕ್ರೀಡಾ ವಲಯದ ಸ್ಟಾರ್ ನಿರೂಪಕಿ ಮಯಂತಿ ಲ್ಯಾಂಗರ್ ಈ ಭಾರಿಯ ಐಪಿಎಲ್ ನಿಂದ ಹಿಂದೆ ಸರಿದಿದ್ದಾರೆ.

ಈ ಕುರಿತು ಟೂರ್ನಿಯ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಟ್ವಿಟರ್ ನಲ್ಲಿ ಖಚಿತಪಡಿಸಿದೆ.

ಈ ಕುರಿತು ಮಯಂತಿ ಕೂಡ ಟ್ವೀಟ್ ಮಾಡಿದ್ದು, ಆರು ವಾರಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಬಾರಿಯ ಐಪಿಎಲ್ ನಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಪ್ರತಿಷ್ಠಿತ ಟೂರ್ನಿಗಳಿಗೆ ನಿರೂಪಣೆ ಮಾಡುವ ಮೂಲಕ ಹೆಸರು ವಾಸಿಯಾಗಿರುವ ಮಯಂತಿ ಲ್ಯಾಂಗರ್, ಈ ಬಾರಿ ಹಿಂದೆ ಸರಿದಿದ್ದಾರೆ.

ಇನ್ನೂ ಈ ಬಾರಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗಲಿವೆ.

Edited By : Nirmala Aralikatti
PublicNext

PublicNext

18/09/2020 10:36 pm

Cinque Terre

54.38 K

Cinque Terre

0

ಸಂಬಂಧಿತ ಸುದ್ದಿ