ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧೋನಿಯ ಕೊನೆಯ 3 ಸಿಕ್ಸರ್‌ ವ್ಯರ್ಥ ಪ್ರಯತ್ನ- ಎಂಎಸ್‌ಡಿಯನ್ನ ಮತ್ತೆ ಕುಟುಕಿದ ಗಂಭೀರ್

ನವದೆಹಲಿ: ಟೀಂ ಇಂಡಿಯಾ ಮಾಜಿ ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕ, ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಅವರನ್ನು ಮತ್ತೆ ಕುಟುಕಿದ್ದಾರೆ.

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ರಾತ್ರಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ನಾಯಕ ಧೋನಿ ಆಯ್ಕೆ ಮಾಡಿಕೊಂಡ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಗೌತಮ್‌ ಗಂಭೀರ್‌ ಸೇರಿದಂತೆ ಅನೇಕ ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ. 217 ರನ್‌ಗಳ ಬೃಹತ್‌ ಮೊತ್ತದ ಗುರಿ ಇದ್ದರೂ ಧೋನಿ ತಮ್ಮ ಸ್ಥಾನದಲ್ಲಿ ಮತ್ತೊಮ್ಮೆ ಸ್ಯಾಮ್‌ ಕರನ್‌ ಅವರನ್ನು ಕಳುಹಿಸಿದರು. ಹೀಗಾಗಿ ಪಾಫ್‌ ಡುಪ್ಲೆಸಿಸ್‌ ಏಕಾಂಗಿಯಾಗಿ ಹೋರಾಡಬೇಕಾಯಿತು.

ಈ ವಿಚಾರವಾಗಿ ಮಾತನಾಡಿರುವ ಗಂಭೀರ್‌, ಬೃಹತ್‌ ಮೊತ್ತದ ಗುರಿ ಹಿಂಬಾಲಿಸುವಾಗ ಧೋನಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರ ಬಗ್ಗೆ ಯಾವುದೇ ಅರ್ಥವಿಲ್ಲ. ಫಾಫ್‌ ಡುಪ್ಲೆಸಿಸ್‌ ಚೆನ್ನೈ ಪರ ಏಕಾಂಗಿಯಾಗಿ ಹೋರಾಡಿದರು. ಧೋನಿ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸರ್‌ ಸಿಡಿಸಿದ ಬಗ್ಗೆ ಮಾತನಾಡಬಹುದು. ಆದರೆ ಈ ಬಗ್ಗೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಯಾವುದೇ ಅರ್ಥವೇ ಇಲ್ಲ. ಇದು ಅವರ ವೈಯಕ್ತಿಕ ರನ್‌ಗಳಷ್ಟೆ ಎಂದು ಟೀಕಿಸಿದ್ದಾರೆ.

ಗಂಭೀರ್ ಈ ಹಿಂದೆ 2011ರ ವಿಶ್ವಕಪ್ ಚಾಂಪಿಯನ್‌ಶಿಪ್ ವಿಚಾರವಾಗಿಯೂ ಅಂದಿನ ನಾಯಕರಾಗಿದ್ದ ಧೋನಿ ವಿರುದ್ಧ ಕಿಡಿಕಾರಿದ್ದರು.

Edited By : Vijay Kumar
PublicNext

PublicNext

23/09/2020 02:30 pm

Cinque Terre

93.8 K

Cinque Terre

9

ಸಂಬಂಧಿತ ಸುದ್ದಿ