ದುಬೈ: ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಮತ್ತು ಮ್ಯಾಜಿಕ್ ಸ್ಪಿನ್ನರ್ ರಶೀದ್ ಖಾನ್ ಅವರ ಉತ್ತಮ ಬೌಲಿಂಗ್‌ನಿಂದ ಸನ್‍ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ರನ್‌ಗಳಿಂದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಚೆನ್ನೈ ಹ್ಯಾಟ್ರಿಕ್ ಸೋಲಿಗೆ ತುತ್ತಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡದ ಯುವ ಆಟಗಾರರಾದ ಅಭಿಷೇಕ್ ಶರ್ಮಾ (31 ರನ್) ಹಾಗೂ ಪ್ರಿಯಂ ಗಾರ್ಗ್ (51 ರನ್) ಸಮಯೋಚಿತ ಆಟದ ನೆರವಿನಿಂದ ಹೈದರಾಬಾದ್ ತಂಡ ಚೆನ್ನೈಗೆ ಗೆಲ್ಲಲು 165 ರನ್‌ಗಳ ಟಾರ್ಗೆಟ್ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ಆರಂಭದಿಂದಲೇ ಕುಂಟುತ್ತಾ ಸಾಗಿತು. ಆದರೆ ಕೊನೆಯವರಿಗೂ ಇದ್ದು ಬ್ಯಾಟ್ ಮಾಡಿದ ನಾಯಕ ಎಂ.ಎಸ್.ಧೋನಿ ತಂಡವನ್ನು ಗೆಲ್ಲಿಸುವಲ್ಲಿ ವಿಫಲವಾದರು. ನಿಗದಿತ 20 ಓವರಿನಲ್ಲಿ ಚೆನ್ನೈ 157 ರನ್ ಹೊಡೆದು ಕೇವಲ 7 ರನ್ ಅಂತರದಲ್ಲಿ ಸೋಲುಂಡಿತು.
PublicNext
03/10/2020 08:41 am