ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ್ರೂ ಜಸ್ಟ್ 11 ರನ್‌ಗೆ ಧೋನಿ ಔಟ್- 10 ರನ್‌ಗಳಿಂದ ಕೆಕೆಆರ್‌ಗೆ ಭರ್ಜರಿ ಜಯ

ಅಬುಧಾಬಿ: ಶೇನ್ ವಾಟ್ಸನ್ ಅರ್ಧಶತಕ ಹಾಗೂ ಅಂಬಾಟಿ ರಾಯುಡು ಹೊರತು ಪಡಿಸಿ ಎಲ್ಲಾ ಆಟಗಾರರು ಬ್ಯಾಟಿಂಗ್ ವೈಫಲ್ಯ ತೋರಿದ ಪರಿಣಾಮ ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 10 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 21ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿ ಕೆಕೆಆರ್ ನೀಡಿದ್ದ 168 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರಿ​ನಲ್ಲಿ 5 ವಿಕೆಟ್‌ ನಷ್ಟಕ್ಕೆ 157 ರನ್‌ ಗಳಿಸಲು ಶಕ್ತವಾಯಿತು. ಚೆನ್ನೈ ಪರ ಶೇನ್ ವಾಟ್ಸನ್ 50 ರನ್ ಹಾಗೂ ಅಂಬಾಟಿ ರಾಯುಡು 30 ರನ್‌ ಗಳಿಸಿದರು. ಆದರೆ ಈ ಬಾರಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ನಾಯಕ ಎಂ.ಎಸ್‌.ಧೋನಿ 11 ರನ್‌ ಗಳಿಸಿ ವರುಣ್ ಚಕ್ರವರ್ತಿ ಎಸೆದ 17ನೇ ಓವರಿನ ಮೂರನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ಪರ ಕೆಕೆಆರ್ ಪರ ರಾಹುಲ್ ತ್ರಿಪಾಠಿ 81 ರನ್‌ (51 ಎಸೆತ, 8 ಬೌಂಡರಿ, 3 ಸಿಕ್ಸರ್) ಹೊರತು ಪಡಿಸಿ ಉಳಿದ ಎಲ್ಲ ಆಟಗಾರರು 20 ರನ್‌ಗಳ ಗಡಿ ದಾಟುವಲ್ಲಿ ವಿಫಲರಾದರು. ಆದರೂ ಕಾರ್ತಿಕ್ ಬಾಯ್ಸ್‌ 20 ಓವರ್​ನಲ್ಲಿ ಸರ್ವಪತನದ ಮೂಲಕ 167 ರನ್ ಪೇರಿಸಿದ್ದರು.

Edited By : Vijay Kumar
PublicNext

PublicNext

07/10/2020 11:50 pm

Cinque Terre

57.29 K

Cinque Terre

5

ಸಂಬಂಧಿತ ಸುದ್ದಿ