ದುಬೈ : ಇಂದು 65 ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವ ಕನ್ನಡ ಜನತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರು ಕನ್ನಡ ಭಾಷೆಯಲ್ಲೇ ಶುಭಕೋರುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.
ನಾಯಕ ವಿರಾಟ್ ಕೊಹ್ಲಿ, ಕನ್ನಡಿಗ ದೇವದತ್ ಪಡಿಕ್ಕಲ್, ಎ ಬಿ ಡೆವಿಲಿಯರ್ಸ್, ಯಜುವೇಂದ್ರ ಚಹಲ್, ಪವನ್ ದೇಶಪಾಂಡೆ,ಉಡಾನಾ ಸೇರಿದಂತೆ ಎಲ್ಲರೂ 'ಕನ್ನಡ ರಾಜ್ಯೋತ್ಸವದ ಶುಭಾಶಯ' ಎಂದು ಹೇಳಿ ಆರ್ ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದೆ.
ಇನ್ನೂ ಈ ವಿಡಿಯೋ ನೋಡಿದ ಕನ್ನಡಿಗರು ಸಕ್ಕತ್ ಖುಷ್ ಆಗಿದ್ದಾರೆ.
PublicNext
01/11/2020 08:51 am