ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರಿಕೆಟರ್ ಹಾರ್ದಿಕ್ ಮೇಲೆ ಅತ್ಯಾಚಾರದ ಆರೋಪ: ಮಾಡಿದ್ದು ದಾವೂದ್ ಆಪ್ತನ ಹೆಂಡತಿ

ಮುಂಬೈ:ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ವಿರುದ್ಧ ಈಗ ಅತ್ಯಾಚಾರದ ಆರೋಪ ಕೇಳಿ ಬರ್ತಿದೆ. ದಾವೂದ್ ಇಬ್ರಾಹಿಂ ಆಪ್ತ ಗ್ಯಾಂಗ್‌ಸ್ಟರ್ ರಿಯಾಝ್ ಭಾಟಿಯಾ ಪತ್ನಿ ರೆಹನುಮಾ ಭಾಟಿಯಾ ಈ ಆರೋಪ ಮಾಡ್ತಿದ್ದಾರೆ. ಆದರೆ ಈ ಅತ್ಯಾಚಾರದ ಆರೋಪದಲ್ಲಿ ಹಾರ್ದಿಕ್ ಪಾಂಡ್ಯ ಒಬ್ಬರೇ ಇಲ್ಲ. ಈ ಹಿಟ್ ಲಿಸ್ಟ್ ನಲ್ಲಿ ಇನ್ನೂ ಕೆಲವು ಪ್ರತಿಷ್ಠಿತರಿದ್ದಾರೆ.ಬನ್ನಿ ಹೇಳ್ತೀವಿ.

ರೆಹನುಮಾ ಭಾಟಿಯಾ ಕಳೆದ ಸೆಪ್ಟಂಬರ್-24 ರಂದು ಸಾಂತಾಕ್ರೂಜ್ ಪೊಲೀಸರಿಗೆ ಅತ್ಯಾಚಾರ ಆಗಿದೆ ಅಂತ ದೂರು ಕೊಟ್ಟಿದ್ದಾರೆ. ಈ ದೂರಿನಲ್ಲಿ ಹಾರ್ದಿಕ್ ಪಾಂಡ್ಯ,ಮುನಾಫ್ ಪಟೇಲ್,ಐಪಿಎಲ್ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾ,ರಾಜಕಾರಣಿ ಪೃಥ್ವಿರಾಜ್ ಕೋಠಾರಿ ಹೆಸರು ಕೂಡ ಇದೆ.

ಇದೇನೋ ಸರಿ ರೆಹನುಮಾ ಸಲ್ಲಿಸಿದ ದೂರಿನಲ್ಲಿ ತಮ್ಮ ಮೇಲೆ ಆದ ಅತ್ಯಾಚಾರದ ದಿನಾಂಕ ಮತ್ತು ವಿಳಾಸಗಳನ್ನ ಉಲ್ಲೇಖಿಸಲಾಗಿಯೇ ಇಲ್ಲ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಯಾವುದೇ ಎಫ್ ಐ ಆರ್ ದಾಖಲಾಗಿಲ್ಲ. ರೆಹನುಮಾ ಈ ಬಗ್ಗೆ ಹೇಳೋದೇ ಬೇರೆ.ನಾನು ಎಫ್‌ಐಆರ್ ದಾಖಲಿಸಲು ಪೊಲೀಸ್ ರನ್ನ ಸಂಪರ್ಕಿಸಿದ್ದೇನೆ. ಆದರೆ ಅವರು ದುಡ್ಡು ಕೇಳುತ್ತಿದ್ದಾರೆ.ದುಡ್ಡುಕೊಟ್ಟು ನಾನೇಕೆ ಭ್ರಷ್ಟಾಚಾರ ಮಾಡಲಿ ಅಂತಲೇ ಹೇಳಿದ್ದಾರೆ ರೆಹನುಮಾ.

ಇಷ್ಟೆಲ್ಲ ಹೇಳಿದ ರೆಹನುಮಾ ತನ್ನ ಪತಿ ರಿಯಾಝ್ ತನನ್ನ ವೇಶಾವಾಟಿಕೆಗೆ ಬಳಸಿಕೊಂಡಿದ್ದಾನೆ. ಅಪರಿಚಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದ ಎಂದು ದೂರಿದ್ದಾರೆ. ಹಾಗೇನೆ ಕುಡಿದು ಬಂದಿದ್ದ ಹಾರ್ದಿಕ್ ಪಾಂಡ್ಯ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ರೆಹನುಮಾ ಉಲ್ಲೇಖಿಸಿದ್ದಾರೆ.

Edited By :
PublicNext

PublicNext

12/11/2021 10:15 pm

Cinque Terre

70.46 K

Cinque Terre

1