ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಹ್ಲಿಯ 9 ತಿಂಗಳ ಪುತ್ರಿಗೆ ರೇಪ್ ಬೆದರಿಕೆ: ವರದಿ ಕೇಳಿದ ಡಿಸಿಡಬ್ಲ್ಯು

ನವದೆಹಲಿ: ಕ್ರೀಡಾ ಅಭಿಮಾನ ಮಾನವೀಯತೆ, ಸೌಜನ್ಯದ ಎಲ್ಲೆ ಮೀರುತ್ತಿದೆ. ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಪುತ್ರಿ ಆಯ್ತು ಈಗ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಅವರ 9 ತಿಂಗಳ ಹಸುಗೂಸಿಗೆ ಅತ್ಯಾಚಾರದ ಬೆದರಿಕೆ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ದೆಹಲಿ ಮಹಿಳಾ ಆಯೋಗ ವಿವರಣೆಯನ್ನು ಕೇಳಿದೆ.

ಹೌದು. ವಿಶ್ವಕಪ್‌ ಸರಣಿಯಲ್ಲಿ ಭಾರತವು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಕೆಲ ಮಂದಿ ವಿರಾಟ್‌ ಕೊಹ್ಲಿ ಅವರ ಮಗುವಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದಾರೆ. ಇದನ್ನು ದೆಹಲಿ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಎಫ್‌ಐಆರ್, ಕೈಗೊಂಡ ಕ್ರಮ, ಆರೋಪಿಗಳ ವಿವರವನ್ನು ನ.8ರ ಒಳಗೆ ನೀಡುವಂತೆ ಮಹಿಳಾ ಆಯೋಗವು ದೆಹಲಿಯ ಸಹಾಯಕ ಕಮಿಷನರ್‌ ಅವರಿಗೆ ಸೂಚಿಸಿದೆ.

ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಟ್ವಿಟರ್ ಹ್ಯಾಂಡಲ್ ಈಗ ಡಿಲೀಟ್ ಆಗಿದೆ. ಆ ವ್ಯಕ್ತಿಯ ಗುರುತನ್ನು ಇನ್ನಷ್ಟೇ ಪತ್ತೆ ಮಾಡಬೇಕಿದ್ದು, ಸ್ಕ್ರೀನ್ ಶಾಟ್ ಗಳು ವೈರಲ್ ಆಗತೊಡಗಿವೆ. 2020ರ ಐಪಿಎಲ್ ಟೂರ್ನಿ ವೇಳೆ ಎಂ.ಎಸ್‌.ಧೋನಿ ಅವರ ಪುತ್ರಿ ಝಿವಾ ಧೋನಿಗೆ ಸಾಮಾಜಿಕ ಜಾಲತಾಣದಲ್ಲಿ ರೇಪ್ ಬೆದರಿಕೆ ಬಂದಿತ್ತು.

Edited By : Vijay Kumar
PublicNext

PublicNext

02/11/2021 04:10 pm

Cinque Terre

37.61 K

Cinque Terre

5

ಸಂಬಂಧಿತ ಸುದ್ದಿ