ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರನ್ನು ವಿವಾಹವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಸ್ವತಃ ಲಲಿತ್ ಮೋದಿ ಸ್ಪಷ್ಟನೆ ನೀಡಿದ್ದಾರೆ.
ಐಪಿಎಲ್ ಪಂದ್ಯಾವಳಿಯ ಮೊದಲ ಅಧ್ಯಕ್ಷ ಮತ್ತು ಕಮಿಷನರ್ ಆಗಿದ್ದ ಮೋದಿ ಅವರು ಗುರುವಾರ ಈ ವಿಚಾರವನ್ನು ಟ್ವಿಟರ್‌ನಲ್ಲಿ ಸರಣಿ ಚಿತ್ರಗಳೊಂದಿಗೆ ಹಂಚಿಕೊಂಡಿದ್ದಾರೆ. ತನ್ನ ಮಾಜಿ ಗೆಳೆಯ ರೋಹ್ಮನ್ ಶಾಲ್ ಜೊತೆಗಿನ ಬ್ರೇಕ್ ಅಪ್ ನಂತರ, ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರು ಲಲಿತ್ ಮೋದಿಯನ್ನು ಮದುವೆಯಾಗಿದ್ದಾರೆ ಎಂಬ ವರದಿಗಳು ಕೇಳಿಬಂದಿದ್ದವು. ಆದರೆ ಈ ಸುದ್ದಿ ಎಲ್ಲೆಡೆ ಹಬ್ಬಲು ಆರಂಭಿಸಿದಂತೆ ಮತ್ತೊಂದು ಟ್ವೀಟ್ ಮಾಡುವ ಮೂಲಕ ಮೋದಿ ಊಹಪೋಹಗಳಿಗೆ ತೆರೆ ಎಳೆದಿದ್ದಾರೆ. ಎರಡನೇ ಟ್ವೀಟ್ ಮಾಡಿರುವ ಮೋದಿ ಅದರಲ್ಲಿ ನಾವು ಪರಸ್ಪರ ಡೇಟಿಂಗ್ ಮಾಡುತ್ತಿರುವುದು ನಿಜ ಎಂದು ಬರೆದುಕೊಂಡಿದ್ದಾರೆ.
46 ವರ್ಷದ ಸುಶ್ಮಿತಾ ಸೆನ್ ಈವರೆಗೂ ಮದುವೆಯಾಗುವ ನಿರ್ಧಾರವನ್ನು ಮಾಡಿಲ್ಲ."ಮಾಲ್ಡೀವ್ಸ್ ಸೇರಿದಂತೆ ಇತರೆಡೆ ಟೂರ್ ಮಾಡಿದ ಬಳಿಕ ಈಗ ಲಂಡನ್‌ಗೆ ನನ್ನ ಕುಟುಂಬದೊಂದಿಗೆ ವಾಪಸಾಗಿದ್ದೇನೆ. ಈಕೆ ನನ್ನ ಅರ್ಧಾಂಗಿ ಸುಶ್ಮಿತಾ ಸೇನ್. ನನ್ನ ಹೊಸ ಜೀವನದಲ್ಲಿ ಹೊಸ ಆರಂಭವಾಗುತ್ತಿದೆ. ಬಹಳ ಸಂಭ್ರಮವಾಗಿದೆ' ಎಂದು 56 ವರ್ಷದ ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ.
PublicNext
14/07/2022 09:24 pm