ಹೈದ್ರಬಾದ್:ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ತಮಿಳು ನಟ ಸಿದ್ಧಾರ್ಥ ಟ್ವೀಟ್ ಈಗ ಭಾರಿ ಚರ್ಚೆ ಆಗುತ್ತಿವೆ. ಅದಕ್ಕೆ ಸಿದ್ಧಾರ್ಥ ಒಂದು ರೀತಿ ಸಮರ್ಥಿಸಿಕೊಂಡರೆ, ಸೈನಾ ನೆಹ್ವಾಲ್ ಬೇರೆ ರೀತಿನೇ ಅದಕ್ಕೆ ರಿಯಾಕ್ಟ್ ಮಾಡಿದ್ದಾರೆ. ಅದ್ಹಾಗೆ ಏನ್ ಈ ಸ್ಟೋರಿ ಅಂತಿರೋ. ಬನ್ನಿ, ಹೇಳ್ತೀವಿ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಂಜಾಬ್‌ನಲ್ಲಿ ಭದ್ರತಾ ಲೋಪ ಆಗಿರೋದು ಇಡೀ ದೇಶಕ್ಕೆ ಗೊತ್ತಿದೆ. ಅದನ್ನೆ ಖಂಡಿಸಿಯೇ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದಾರೆ. ದೇಶದ ಪ್ರಧಾನಿಗೆ ಭದ್ರತೆ ಇಲ್ಲ ಅಂದ್ರೆ ಹೇಗೆ. ದೇಶ ಹೇಗೆ ಸುರಕ್ಷಿತವಾಗಿರುತ್ತದೆ ಅನ್ನೋ ಅರ್ಥದಲ್ಲಿಯೇ ಟ್ವಿಟರ್ ಮಾಡಿದರು.
ಇದಕ್ಕೆ ತಮಿಳು ನಟ ಸಿದ್ಧಾರ್ಥ ಟ್ವಿಟರ್ ನಲ್ಲಿಯೇ ಪ್ರತಿಕ್ರಿಯೆ ನೀಡಿದ್ದರು. "ಜಗತ್ತಿನ ಸೆಟ್ಲ್ ಕಾಕ್ ಚಾಂಪಿಯನ್' ದೇಶವನ್ನ ರಕ್ಷಿಸುವ ಜನ ನಮ್ಮಲ್ಲಿದ್ದಾರೆ' ಅಂತಲೇ ಟ್ವೀಟ್ ಮಾಡಿದ್ದರು. ಇಲ್ಲಿ ಸೆಟ್ಲ್ ಅನ್ನೋ ಪದವೇ ಈಗ ವಿವಾದ ಆದಂತಿದೆ. ಅದಕ್ಕೇನೆ ಸೈನಾ ನೆಹ್ವಾಲ್ ರಿಯಾಕ್ಟ್ ಮಾಡಿದ್ದಾರೆ. ಸಿದ್ಧಾರ್ಥ್ ಬಗ್ಗೆ ನನಗೆ ಗೌರವ ಇದೆ. ಇನ್ನೂ ಒಳ್ಳೆ ಪದ ಬಳಸಿಯೇ ತಮ್ಮ ಅಭಿಪ್ರಾಯ ಹೇಳಬಹುದಿತ್ತು ಅಂತಲೇ ಹೇಳಿಕೆ ಕೊಟ್ಟಿದ್ದಾರೆ.
ಆದರೆ ಸಿದ್ಧಾರ್ಥ್ ಕೂಡ ಸುಮ್ನೆ ಕುಳಿತಿಲ್ಲ.ನಾನು ಬಳಸಿದ ಪದವನ್ನ ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಸರ್ಮರ್ಥಿಸಿಕೊಂಡಿದ್ದಾರೆ.
PublicNext
11/01/2022 10:13 am