ಅಪ್ಪು ಅಗಲಿಕೆಗೆ 1 ತಿಂಗಳು ಗತಿಸಿದರು ಅವರಿಲ್ಲ ಎನ್ನುವುದನ್ನು ಒಪ್ಪಲಾಗುತ್ತಿಲ್ಲ. ಇದರ ಮಧ್ಯೆ ಆಸ್ಟ್ರೇಲಿಯಾ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಅಪ್ಪುಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಹೌದು. ರಾಜಕುಮಾರ ಚಿತ್ರದ `ಬೊಂಬೆ ಹೇಳುತೈತೆ’ ಹಾಡಿಗೆ ರೀ ಫೇಸ್ ಆ್ಯಪ್ ಮೂಲಕ ಮಾಡಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಜೊತೆಗೆ ಹ್ಯಾಶ್ ಟ್ಯಾಗ್ ಬಳಸಿ ರೆಸ್ಪೆಕ್ಟ್ ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ಅಪ್ಪುಗೆ ವಾರ್ನರ್ ಡಿಫರೆಂಟ್ ಆಗಿ ನಮನ ಸಲ್ಲಿಸಿದ್ದಾರೆ. ವಾರ್ನರ್ ವಿಶೇಷ ಗೌರವಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
PublicNext
06/12/2021 02:09 pm