ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಸೆಂಬರ್ ಎರಡನೇ ವಾರದಿಂದ ಶುರುವಾಗ್ತಿದೆ ಕಿರುತೆರೆ ಕ್ರಿಕೆಟ್

ವಾಸವಿ ವೆಂಚರ್ಸ್ ಸಂಸ್ಥೆ ಸಹಯೋಗದಲ್ಲಿ ಡಿಸೆಂಬರ್ ಎರಡನೇ ವಾರದಿಂದ ‘ಟೆಲಿವಿಷನ್ ಕ್ರಿಕೆಟ್ ಲೀಗ್’ ನಡೆಯಲಿದ್ದು, ಇದರಲ್ಲಿ ಕಿರುತೆರೆ ಕಲಾವಿದರು ಭಾಗವಹಿಸಲಿದ್ದಾರೆ. ಟಿಸಿಎಲ್ ನಲ್ಲಿ ತಂಡಗಳು ಈಗಾಗಲೇ ಅಭ್ಯಾಸದಲ್ಲಿ ತೊಡಗಿವೆ. ಈ ಪಂದ್ಯಾವಳಿಯಲ್ಲಿ ಕ್ರೇಜಿ ಕಿಲ್ಲರ್ಸ್, ಗ್ಯಾಂಗ್ ಗರುಡಾಸ್, ಗ್ರೌಂಡ್ ಹಂಟರ್ಸ್, ಜಟಾಯು ಜೈಂಟ್ಸ್, ಕಿಂಗ್ ಕೇಸರಿಸ್, ಸರ್ಪ ಸ್ಟ್ರೈಕರ್ ಎಂಬ 6 ತಂಡಗಳಿರಲಿದ್ದು, ಕಿರುತೆರೆ ನಟ-ನಟಿಯರು ಭಾಗವಹಿಸಲಿದ್ದಾರೆ.

ದೀಪಕ್ ಹಾಗೂ ಮಂಜೇಶ್ ಸಾರಥ್ಯದಲ್ಲಿ ನಡೆಯುತ್ತಿರುವ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ ಬರೋಬ್ಬರಿ‌ 102 ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ. ಈಗಾಗಲೇ ಎರಡು ಸೀಸನ್ಸ್ ಯಶಸ್ವಿಯಾಗಿ ಪೂರೈಸಿರುವ ಟಿಸಿಎಲ್, ಮೂರನೇ ಸೀಸನ್ ಪಂದ್ಯಾವಳಿಗೆ ಸಜ್ಜಾಗಿದೆ.

ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಸ್ಟರ್ ಆನಂದ್, ಬಿಗ್ ಬಾಸ್ ಮಂಜು ಪಾವಗಡ, ಸಂಸ್ಥಾಪಕ ದೀಪಕ್, ಸಹ ಸಂಸ್ಥಾಪಕರಾದ ಮಂಜೇಶ್ ಮತ್ತು ವೈ ವಿ ಕಾರ್ತಿಕ್ ಸೇರಿದಂತೆ ಹಲವು‌ ಕಿರುತೆರೆ ಕಲಾವಿದರು ಭಾಗಿಯಾಗಿದ್ದರು.

ಕಿರುತೆರೆ ಕಲಾವಿದರೆಲ್ಲರೂ ಸೇರುವುದೇ ಒಂದು ಹಬ್ಬ. ಇಂತಹ ಹಬ್ಬಕ್ಕೆ ಟೆಲಿವಿಷನ್ ಕ್ರಿಕೆಟ್ ಲೀಗ್ ಸಜ್ಜಾಗಿದೆ. ಬರೋ ಡಿಸೆಂಬರ್ ಎರಡನೇ ವಾರದಿಂದ ಕಿರುತೆರೆ ಕಲಾವಿದರ ಕ್ರಿಕೆಟ್ ಹಂಗಾಮ ಶುರುವಾಗಲಿದೆ.

Edited By : Nirmala Aralikatti
PublicNext

PublicNext

17/11/2021 09:11 pm

Cinque Terre

43.2 K

Cinque Terre

1