ಬೆಂಗಳೂರು: ಬಿಗ್ ಬಾಸ್ ಲವ್ ಬರ್ಡ್ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ಜೊತೆಗೂಡಿ ಅತೀ ವೇಗದಲ್ಲಿಯೇ ಕಾರ್ ಸವಾರಿ ಹೋಗಿದ್ದಾರೆ. ಆದರೆ ಇದು ಒಂದು ನ್ಯಾಷ್ನಲ್ ರೆಕಾರ್ಡ್ ಚಾಲೆಂಜ್. ಪ್ರತಿ ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿಯೇ ಕಾರ್ ಚಲಾಯಿಸಿದ್ದಾರೆ ಅರವಿಂದ್. ಇದರಲ್ಲಿ ಕುಳಿತಿದ್ದ ದಿವ್ಯಾ, ಏನು ಹೇಳಿದ್ರು ಅನ್ನೋ ಕುತೂಹಲ ಇದೇ ಅಲ್ವೇ ಹೇಳ್ತೀವಿ ಬನ್ನಿ.
ಅರಿವಿಂದ್ ಕೆ.ಪಿ ಮೊದಲೇ ರೈಡರ್. ಪಕ್ಕದಲ್ಲಿ ಪ್ರೇಯಿಸಿ ಕುಳಿತರೇ ಇನ್ನೇನು ? ಕಾರ್ ಸ್ಪೀಡ್ ಗೆ ಸ್ವರ್ಗವೇ ಹತ್ತಿರ ಆಗುತ್ತದೆ. ನ್ಯಾಷ್ನಲ್ ರೆಕಾರ್ಡ್ ಗಾಗಿಯೇ ನಡೆದ ಕಾರ್ ರೇಸ್ ಅಲ್ಲಿ ದಿವ್ಯಾ ಕೂಡ ಅರವಿಂದ್ ಜೊತೆಗೆ ಕಾರ್ ಅಲ್ಲಿ ಕುಳಿತಿದ್ದರು. ಪ್ರತಿ ಗಂಟೆಗೆ 200 ಕಿಲೋಮೀಟರ್ ಸ್ಪೀಡ್ ಅಲ್ಲಿಯೆ ಅರವಿಂದ್ ಕಾರ್ ಓಡಿಸಿದ್ದಾರೆ. ಪಕ್ಕದಲ್ಲಿಯೇ ಕುಳಿತ ದಿವ್ಯಾ ಅದನ್ನ ಎಂಜಾಯ್ ಮಾಡಿದ್ದಾರೆ. ಡ್ರೈವ್ ಮುಗಿದ ಬಳಿಕ ದಿವ್ಯಾ ಅನುಭವನ್ನ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ. ಇಷ್ಟು ವೇಗದಲ್ಲಿ ಓಡಿದ ಕಾರ್ ನಲ್ಲಿ ನಾನು ಎಂದೂ ಕುಳಿತಿರಲಿಲ್ಲ.ಕಾರ್ ಡ್ರೈವರ್ ಮೇಲೆ ನಂಬಿಕೆ ಇದ್ದರೆ, ಇದು ನಿಜಕ್ಕೂ ಫನ್ ಆಗಿರುತ್ತದೆ.ನನಗೂ ಈಗ ಅದೇ ಫೀಲಿಂಗ್ ಇದೆ ಅಂತಲೇ ದಿವ್ಯಾ ಬರೆದುಕೊಂಡಿದ್ದಾರೆ.
PublicNext
20/10/2021 09:41 pm