ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಚ್ಚನಿಗೆ ವಿಶೇಷ ರಾಜಸ್ಥಾನ್ ರಾಯಲ್ಸ್ ವಿಶೇಷ ಗಿಫ್ಟ್‌

49ನೇ ವಸಂತಕ್ಕೆ ಕಾಲಿಟ್ಟಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ಗೆ ಎಲ್ಲೆಡೆಯಿಂದ ಶುಭಾಶಯಗಳು ಹರಿದುಬರುತ್ತಿವೆ. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಎಸೆತದ ಮೂಲಕ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದ ನೀರಜ್ ಚೋಪ್ರಾ, ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಸೇರಿದಂತೆ ಅನೇಕರು ಕಿಚ್ಚನಿಗೆ ಶುಭಾಶಯ ಕೋರಿದ್ದರು.

ಭಾರತೀಯ ಕ್ರಿಕೆಟ್​ಗೆ ಹೊಸ ಆಯಾಮವನ್ನು ನೀಡಿದ ಐಪಿಎಲ್​ ಪಂದ್ಯಾವಳಿಯ ಮೊದಲ ಸೀಸನ್ ವಿನ್ನರ್ ರಾಜಸ್ಥಾನ ರಾಯಲ್ಸ್, ಕಿಚ್ಚ ಸುದೀಪ್​ಗೆ ಜನ್ಮದಿನದ ಶುಭಾಶಯಗಳನ್ನು ಕೋರಿದೆ. ಜೊತೆಗೆ ವಿಶೇಷ ಉಡುಗೊರೆ ನೀಡಿದೆ. ಇದನ್ನು ಕಿಚ್ಚ ಸುದೀಪ್​ಗೆ ತಲುಪಿಸುವ ಕೆಲಸ ಮಾಡಿದ್ದು, ರಾಜಸ್ಥಾನ ತಂಡದ ಪರ ಆಡುವ ಕರ್ನಾಟಕದ ಮಿಸ್ಟರಿ ಸ್ಪಿನ್ನರ್ ಕೆ.ಸಿ.ಕಾರ್ಯಪ್ಪ. ಹೀಗಾಗಿ ಕಾರ್ಯಪ್ಪ ಅವರಿಗೆ ರಾಜಸ್ಥಾನ್ ರಾಯಲ್ಸ್ ಧನ್ಯವಾದ ತಿಳಿಸಿದೆ. ಜೆರ್ಸಿಯೊಂದಿಗೆ ಶುಭವನ್ನು ಕೋರುವ ಒಂದು ಹಾರೈಕೆಯ ಪತ್ರವನ್ನೂ ಕೂಡ ರಾಯಲ್ಸ್ ಕಳುಹಿಸಿಕೊಟ್ಟಿದೆ.

Edited By : Vijay Kumar
PublicNext

PublicNext

02/09/2021 08:09 pm

Cinque Terre

108 K

Cinque Terre

0

ಸಂಬಂಧಿತ ಸುದ್ದಿ