ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಬೇಟೆಯಾಡಿದ ನೀರಜ್ ಚೋಪ್ರಾ ಸುದೀಪ್ ಜನ್ಮದಿನಕ್ಕೆ ಹಾಗೂ ವಿಕ್ರಾಂತ್ ರೋಣ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ನಾಳೆ (ಸೆಪ್ಟೆಂಬರ್ 2) ಡೆಡ್ ಮ್ಯಾನ್ ಆ್ಯಂಥಮ್ ರಿಲೀಸ್ ಆಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ವಿಕ್ರಾಂತ ರೋಣ ಚಿತ್ರತಂಡ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ನೀರಜ್ ಚೋಪ್ರಾ ಅವರು ಸುದೀಪ್ಗೆ ಬರ್ತ್ ಡೆ ವಿಶ್ ಮಾಡಿದ್ದಾರೆ. ಜೊತೆಗೆ ಅವರ ಸಿನಿಮಾಗೂ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿ ಜತೆ ಅಚ್ಚರಿ ಕೂಡ ಹೊರ ಹಾಕಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ನೀರಜ್ ಚೋಪ್ರಾ ಅವರು ಭಾರತವನ್ನು ಪ್ರತಿನಿಧಿಸಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಸದ್ಯ ಸುದೀಪ್ ಗೆ ಬರ್ತ್ ಡೇ ವಿಶ್ ಮಾಡಿರೋದು ವಿಶೇಷ. ನೀರಜ್ ಚೋಪ್ರಾ ಟ್ವೀಟ್ ಗೆ ಪ್ರತಿಕ್ರಿಯಿಸಿದ ಸುದೀಪ್ ಇದು ತುಂಬಾ ಸಿಹಿಯಾಗಿದೆ. ನನ್ನ ಸಹೋದರಿನಿಗೆ ಧನ್ಯವಾದಗಳು. ನಿಮಗೆ ಯಾವಗಲೂ ನನ್ನ ಶುಭ ಹಾರೈಕೆ ಇರುತ್ತದೆ ಎಂದಿದ್ದಾರೆ.
PublicNext
01/09/2021 03:48 pm