ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಸ್ತೆಯಲ್ಲೇ ಜಾವೆಲಿನ್ ಎಸೆದ ರಾಖಿ ಸಾವಂತ್ !

ನೀರಜ್ ಚೋಪ್ರಾ ಅವರಂತೆ ಜಾವೆಲಿನ್ ಎಸೆಯಲು ಪ್ರಯತ್ನಿಸಿ ಸುದ್ದಿಯಲ್ಲಿದ್ದಾರೆ ಬಾಲಿವುಡ್ ನಟಿ ರಾಖಿ ಸಾವಂತ್!

'ಜಾವೆಲಿನ್ ಸೂಪರ್ ಸ್ಟಾರ್' ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಆಥ್ಲೆಟಿಕ್ಸ್​ನಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದು ಕೊಟ್ಟು, ಇತಿಹಾಸ ಸೃಷ್ಟಿಸಿದ್ದರು.

ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಅವರನ್ನು ವಿಶೇಷವಾಗಿ ಗೌರವಿಸಿ, ಪ್ರತಿವರ್ಷ ಆಗಸ್ಟ್ 7ನ್ನು 'ಜಾವೆಲಿನ್ ಥ್ರೋ' ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಘೋಷಿಸಿದೆ. ಅಲ್ಲದೆ, ಆ ದಿನದಂದು ದೇಶಾದ್ಯಂತ ಜಾವೆಲಿನ್ ಥ್ರೋ ಟೂರ್ನಿ ಆಯೋಜಿಸಲಾಗುವುದು ಎಂದು ತಿಳಿಸಿದೆ. ಈ ಎಲ್ಲ ಅಂಶಗಳು ಸದ್ಯ ದೇಶದಲ್ಲಿ ಜಾವೆಲಿನ್ ಆಟದ ಮೇಲೆ ಹೊಸ ಟ್ರೆಂಡನ್ನೇ ನಿರ್ಮಿಸಿದೆ.

ಈಗ ಬಾಲಿವುಡ್ ಬೆಡಗಿ ರಾಖಿ ಸಾವಂತ್ ಕೂಡ 'ವಿಶೇಷ ಜಾವೆಲಿನ್' ಎಸೆದು ಸುದ್ದಿಯಲ್ಲಿದ್ದಾರೆ.

ರಾಖಿ, ತಮ್ಮ ನೇರ ಮತ್ತು ಜನರೊಡನೆ ಬೆರೆಯುವ ವ್ಯಕ್ತಿತ್ವದಿಂದಾಗಿ ಅಭಿಮಾನಿಗಳಿಗೆ ಪ್ರಿಯರಾಗಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿರುವ ಅವರು, ಇದೀಗ ನೀರಜ್ ಚೋಪ್ರಾ ಜಯವನ್ನು ತಮ್ಮದೇ ಆದ ಶೈಲಿಯಲ್ಲಿ ಸಂಭ್ರಮಿಸಿ, ಮರದ ಕೋಲೊಂದನ್ನು ತೆಗೆದುಕೊಂಡು ನೀರಜ್ ಅವರನ್ನು ಅನುಕರಿಸಿದ್ದಾರೆ. ಈ ವೀಡಿಯೊ ಈಗ ವೈರಲ್ ಆಗಿದೆ.

Edited By : Nagesh Gaonkar
PublicNext

PublicNext

14/08/2021 06:31 pm

Cinque Terre

85.36 K

Cinque Terre

3