ನವ ದೆಹಲಿ: ಫಿಟ್ ಇಂಡಿಯಾ ಅಭಿಯಾನದ ಮೊದಲ ವಾರ್ಷೀಕೋತ್ಸವದ ಅಂಗವಾಗಿ ಇಂದು ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ. ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಿಲಿಂದ್ ಸೋಮನ್ ಸೇರಿದಂತೆ ಹಲವು ಫಿಟ್‌ನೆಸ್ ದಿಗ್ಗಜರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಂವಾದ ನಡೆಸಿದರು.
ನಿತ್ಯಜೀವನದಲ್ಲಿ ಫಿಟ್‌ನೆಸ್ ಇರಲೇಬೇಕು. ಕೊರೊನ ಕಾಲದಲ್ಲಿ ಫಿಟ್‌ನೆಸ್ ಜೀವನದ ಇನ್ನೂ ಪ್ರಮುಖ ಅಂಶವಾಗಿದೆ ಎಂದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಫಿಟ್‌ನೆಸ್ ಬಗ್ಗೆ ಚರ್ಚೆ ನಡೆಸಿದ ಪ್ರಧಾನಿ ಮೋದಿ, ಆಟಗಾರರ ನಿತ್ಯ ಬದುಕಿನಲ್ಲಿ ಫಿಟ್‌ನೆಸ್ ಎಷ್ಟು ಮುಖ್ಯವಾಗುತ್ತದೆ ಎಂಬುದರ ಬಗ್ಗೆ ಚರ್ಚೆ ನಡೆಸಿದರು. ಚರ್ಚೆಯ ವೇಳೆ ಒತ್ತಡದ ದಿನಚರಿಯ ನಡುವೆಯೂ ನೀವು ಇಷ್ಟೊಂದು ಲವಲವಿಕೆಯಿಂದಿರಲು ಹೇಗೆ ಸಾಧ್ಯ? ಎಂದು ಪ್ರಧಾನಿ ಮೋದಿ ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಕೊಹ್ಲಿ ನಾನು ಫಿಟ್‌ನೆಸ್ ಬಗ್ಗೆ ಹೆಚ್ಚು ಗಮನ ಹರಿಸುವುದರಿಂದ ಇದೆಲ್ಲವನ್ನೂ ನಿಭಾಯಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿಗೆ ಪ್ರಧಾನಿ ಮೋದಿ ಶುಭಾಶಯ ತಿಳಿಸಿದರು.
PublicNext
24/09/2020 03:28 pm