ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಸಿಸಿಐ ಶೀರ್ಷಿಕೆ ಪ್ರಾಯೋಜಕತ್ವ ಮಾಸ್ಟರ್ ಕಾರ್ಡ್ ಪಾಲು

ಮುಂಬೈ: ಪೇಟಿಎಂ ಬದಲಿಗೆ ಗ್ಲೋಬಲ್ ಪೇಮೆಂಟ್ಸ್ ಕಂಪನಿ ಮಾಸ್ಟರ್‌ಕಾರ್ಡ್ ಭಾರತದಲ್ಲಿ ನಡೆಯುವ ಎಲ್ಲ ಕ್ರಿಕೆಟ್​ ಪಂದ್ಯಗಳ ಪ್ರಾಯೋಜಕತ್ವವವನ್ನು ಪಡೆದುಕೊಂಡಿದೆ. ಇರಾನಿ ಟ್ರೋಫಿ, ದುಲೀಪ್​​ ಟ್ರೋಪಿ ಮತ್ತು ರಣಜಿ ಟ್ರೋಫಿ ಪಂದ್ಯಗಳ ಪ್ರಾಯೋಜಕತ್ವವನ್ನು ವಹಿಸಿಕೊಳ್ಳಲಿದೆ.

ಶೀರ್ಷಿಕೆ ಪ್ರಯೋಜಕವಾಗಿದ್ದ ಪೇಟಿಎಂನ 7 ವರ್ಷಗಳ ಒಪ್ಪಂದ ಕೊನೆಗೊಂಡಿದೆ. ಇದೀಗ ಪೇಟಿಎಂ ಸಂಸ್ಥೆ ತನ್ನ ಬಳಿ ಇದ್ದ ಪ್ರಾಯೋಜಕತ್ವ ಹಕ್ಕನ್ನು ಮಾಸ್ಟರ್ ಕಾರ್ಡ್‌ಗೆ ವರ್ಗಾಯಿಸಿದ್ದು, ಈ ಹಿಂದಿನಂತೆಯೇ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ 3.8 ಕೋಟಿ ರೂ. ಪಾವತಿಯಾಗಲಿದೆ. ಈ ಬಗ್ಗೆ ಬಿಸಿಸಿಐ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.

ಬಿಸಿಸಿಐ ಆಯೋಜಿಸುವ ಮಹಿಳಾ ಮತ್ತು ಪುರುಷ ತಂಡಗಳ ಅಂತರರಾಷ್ಟ್ರೀಯ ಪಂದ್ಯಗಳು ಸೇರಿದಂತೆ ಇರಾನಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ರಣಜಿ ಟ್ರೋಫಿಯಂತಹ ದೇಸಿಯ ಕ್ರಿಕೆಟ್ ಪಂದ್ಯಗಳು ಮತ್ತು ಭಾರತದಲ್ಲಿ ನಡೆಯುವ ಎಲ್ಲಾ ಜೂನಿಯರ್ ಕ್ರಿಕೆಟ್ (19 ವರ್ಷದೊಳಗಿನ ಮತ್ತು 23 ವರ್ಷದೊಳಗಿನ) ಪಂದ್ಯಗಳಿಗೂ ಮಾಸ್ಟರ್ ಕಾರ್ಡ್ ಶೀರ್ಷಿಕೆ ಪ್ರಾಯೋಜಕ ಮಾಡಲಿದೆ ಎಂದು ಮಾಹಿತಿ ಹಂಚಿಕೊಂಡಿದೆ.

Edited By : Vijay Kumar
PublicNext

PublicNext

05/09/2022 08:13 pm

Cinque Terre

29.92 K

Cinque Terre

1

ಸಂಬಂಧಿತ ಸುದ್ದಿ