ದುಬೈ : ಗಾಯದ ಸಮಸ್ಯೆಗೆ ಸಿಲುಕಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಮತ್ತು ವೇಗಿ ಭುವನೇಶ್ವರ್ ಕುಮಾರ್ ಅವರ ಈ ಬಾರಿಯ ಐಪಿಎಲ್ ಅಭಿಯಾನಕ್ಕೆ ತೆರೆ ಬಿದ್ದಿದೆ.
ಭುವನೇಶ್ವರ್ ವರ್ಷಾಂತ್ಯದ ಆಸ್ಟ್ರೇಲಿಯ ಪ್ರವಾಸವನ್ನು ಕಳೆದು ಕೊಳ್ಳುವ ಸಾಧ್ಯತೆಯಿದೆ.
ಕೋಲ್ಕತಾ ತಂಡದೆದುರಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಡೆಲ್ಲಿ ಮಿಶ್ರಾ ಅವರ ಉಂಗುರ ಬೆರಳಿಗೆ ತೀವ್ರ ಗಾಯವಾಯಿತು. ಅವರು ಆಡಿದ ಮೂರು ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದಿದ್ದರು.
ಬೆರಳಿಗೆ ಗಾಯ ಮಾಡಿಕೊಂಡ ಮಿಶ್ರಾ ಇನ್ನುಳಿದ ಪಂದ್ಯಗಳಲ್ಲಿ ಆಡದಿರುವುದು ಬೇಸರದ ವಿಷಯವಾಗಿದೆ.
ಅದೇ ರೀತಿ ಭುವಿಗೂ ಗಾಯ
ಚೆನ್ನೈ ವಿರುದ್ಧದ ಪಂದ್ಯದ ವೇಳೆ ಭುವನೇಶ್ವರ್ ತೊಡೆ ಸ್ನಾಯುವಿನ ಗಾಯಕ್ಕೆ ಒಳಗಾದರು.
ಅವರಿಗೆ ಆಯ ಗಾಯದ ತೀವ್ರತೆ ಎಷ್ಟೆಂಬುದು ಖಚಿತವಾಗಿಲ್ಲ. ಆದರೆ ಪೂರ್ಣವಾಗಿ ಚೇತರಿಸಿಕೊಳ್ಳಲು 6 ರಿಂದ 8 ವಾರ ಬೇಕಾಗಬಹುದೆಂದು ಹೇಳಲಾಗಿದೆ.
ಹೀಗಾಗಿ ಅವರು ಭಾರತದ ಆಸ್ಟ್ರೇಲಿಯ ಪ್ರವಾಸದಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎಂದು ಬಿಸಿಸಿಐಯ ಹಿರಿಯ ಅಧಿಕಾರಿಯೊಬ್ಬರುತಿಳಿಸಿದ್ದಾರೆ.
PublicNext
06/10/2020 07:53 am