ಮುಂಬೈ: ಟೀಂ ಇಂಡಿಯಾದ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಆಯ್ಕೆಯಾಗಿದ್ದಾರೆ.
ಮದನ್‌ಲಾಲ್ ನೇತೃತ್ವದ ಕ್ರಿಕೆಟ್ ಅಡ್ವೈಸರಿ ಕಮಿಟಿ(ಸಿಎಸಿ) ಈ ಆಯ್ಕೆಯನ್ನು ಮಾಡಿದೆ. ಸಿಎಸಿ ಅಭ್ಯರ್ಥಿಗಳನ್ನು ವರ್ಚುವಲ್ ಭೇಟಿಯಾಗಿ ಆಲ್‌ಇಂಡಿಯಾ ಸೀನಿಯರ್ ಸೆಲೆಕ್ಷನ್ ಕಮಿಟಿಯ ಮೂವರು ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಈವರೆಗೆ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಕರ್ನಾಟಕ ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಕರ್ತವ್ಯದಲ್ಲಿದ್ದರು. ಈಗ ಅವರ ಸ್ಥಾನವನ್ನು ಚೇತನ್ ಶರ್ಮಾ ವಹಿಸಿಕೊಳ್ಳಲಿದ್ದಾರೆ.
ಚೇತನ್ ಶರ್ಮಾ ಟೀಂ ಇಂಡಿಯಾ ಪರ 23 ಟೆಸ್ಟ್ ಪಂದ್ಯ ಹಾಗೂ 65 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಚೇತನ್ ಶರ್ಮಾ ಜೊತೆಗೆ ದೆಬಾಶಿಶ್ ಮೊಹಾಂತಿ ಹಾಗೂ ಅಭಯ್ ಕುರುವಿಲ್ಲ ಕೂಡ ಆಯ್ಕೆ ಸಮಿತಿಗೆ ಸೇರ್ಪಡೆಗೊಂಡಿದ್ದಾರೆ.
PublicNext
25/12/2020 08:44 am