ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನೇಕ ಮೈಲಿಗಲ್ಲು ನಿರ್ಮಿಸಿದ್ದಲ್ಲದೇ ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಆದರೆ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಚೆಲ್ಲಿದ ಆಟಗಾರ ಎಂಬ ಟೀಕೆಗೆ ಗುರಿಯಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಹಾಗೂ ಟೆಸ್ಟ್ ಸರಣಿಯ ಮೊದಲ ಪಂದ್ಯದ ಸೋಲಿಗೆ ಟೀಂ ಇಂಡಿಯಾ ಆಟಗಾರರ ಕಳಪೆ ಫೀಲ್ಡಿಂಗ್ ಕಾರಣ ಎಂಬ ಚರ್ಚೆ ಶುರುವಾಗಿದೆ. ಈ ಮಧ್ಯೆ ಸಿಕ್ಕ ಅಂಕಿ ಅಂಶಗಳ ಪ್ರಕಾರ ಕೊಹ್ಲಿ ಕೆಟ್ಟ ಸಾಧನೆ ಹೊರ ಬಿದ್ದಿದೆ. 2019ರ ವಿಶ್ವಕಪ್‌ನಿಂದ ಇಲ್ಲಿಯವರೆಗೆ ಭಾರತ 43 ಪಂದ್ಯಗಳಲ್ಲಿ ಎದುರಾಳಿ ತಂಡಗಳಿಗೆ 70 ಬಾರಿ ಜೀವದಾನ ನೀಡಿದೆ. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೆಚ್ಚು 14 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತವು ಈಗಾಗಲೇ ತಂಡ ಮೂರು ಏಕದಿನ, ಮೂರು ಟಿ20 ಮತ್ತು ಒಂದು ಟೆಸ್ಟ್ ಪಂದ್ಯವನ್ನು ಆಡಿದೆ. ಈ ಏಳೂ ಪಂದ್ಯಗಳಲ್ಲಿ ಟೀಂ ಇಂಡಿಯಾ ತನ್ನ ಎಡವಟ್ಟುಗಳಿಂದ ಅನೇಕ ಪಂದ್ಯಗಳಲ್ಲಿ ಸೋಲಬೇಕಾಯಿತು. ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಅತ್ಯುತ್ತಮ ಫೀಲ್ಡರ್‌ಗಳು ಕ್ಯಾಚ್ ಚೆಲ್ಲಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ಐದು ಕ್ಯಾಚ್‌ಗಳನ್ನು ಕೈಚೆಲ್ಲಿತು. ಜಸ್‌ಪ್ರೀತ್ ಬುಮ್ರಾ, ಪೃಥ್ವಿ ಶಾ ಸುಲಭದ ತುತ್ತಾಗಬಹುದಾಗಿದ್ದ ಕ್ಯಾಚ್‌ಗಳನ್ನ ಕೈ ಬಿಟ್ಟರು.
ಅಡಿಲೇಡ್ ಟೆಸ್ಟ್ಗೂ ಮೊದಲು ಭಾರತ ತಂಡ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳಲ್ಲಿ 19 ಕ್ಯಾಚ್‌ಗಳನ್ನು ಕೈಚೆಲ್ಲಿದೆ. 2020ರ ಆರಂಭದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸ ಕೈಗೊಂಡಾಗ 12 ಕ್ಯಾಚ್‌ಗಳನ್ನು ಬಿಟ್ಟಿತ್ತು.
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೆಚ್ಚು 14 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ತಂಡದ ಉಳಿದವರನ್ನು ಕೊಹ್ಲಿಗೆ ಹೋಲಿಸಿದಾಗ ಅವರು ನಾಯಕನಿಗಿಂತ ಬಹಳ ಹಿಂದುಳಿದಿದ್ದಾರೆ. ಕೊಹ್ಲಿ ನಂತರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರ ಹೆಸರು ಹೆಚ್ಚಾಗಿ ಕೇಳಿಬಂದಿದೆ. ಇಬ್ಬರೂ ಐದು ಕ್ಯಾಚ್‌ಗಳನ್ನ ಕೈಚೆಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ತಲಾ ಮೂರು ಕ್ಯಾಚ್‌ಗಳನ್ನು ಬಿಟ್ಟಿದ್ದಾರೆ.
PublicNext
24/12/2020 02:34 pm