ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಂಟಿಂಗ್ ವಿಶ್ವದಾಖಲೆ ಮುರಿಯಲು ವಿರಾಟ್‌ ಕಾತುರ

ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ನಾಯಕನಾಗಿ ವಿರಾಟ್‌ ಈಗ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ವಿಶ್ವದಾಖಲೆ ಮುರಿಯುವ ಕಾತುರದಲ್ಲಿ ಇದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮಾತ್ರವೇ ವಿರಾಟ್ ಕೊಹ್ಲಿ ಭಾಗಿಯಾಗಲಿದ್ದಾರೆ. ಅಡಿಲೆಡ್ ಟೆಸ್ಟ್‌ ಬಳಿಕ ಕೊಹ್ಲಿ ಪಿತೃತ್ವದ ರಜೆಯ ಹಿನ್ನೆಲೆಯಲ್ಲಿ ತವರಿಗೆ ವಾಪಸ್‌ ಆಗಲಿದ್ದಾರೆ. ಮೊದಲ ಪಂದ್ಯದಲ್ಲೇ ವಿರಾಟ್ ಶತಕ ಬಾರಿಸಿದರೆ ದೊಡ್ಡ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯುವ ಅವಕಾಶವಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಶತಕ ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರಿಕಿ ಪಾಂಟಿಂಗ್ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಇಬ್ಬರು ಆಟಗಾರರು ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕರಾಗಿ ತಲಾ 41 ಶತಕವನ್ನು ದಾಖಲಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇನ್ನೊಂದು ಶತಕವನ್ನು ಕೊಹ್ಲಿ ಸಿಡಿದರೆ ಅದು ನಾಯಕನಾಗಿ 42ನೇ ಶತಕವಾಗಿರಲಿದೆ.

ವಿಶೇಷವೆಂದರೆ ನಾಯಕನಾಗಿ 41 ಶತಕವನ್ನು ಸಿಡಿಸಲು ರಿಕಿ ಪಾಂಟಿಂಗ್ 324 ಪಂದ್ಯಗಳನ್ನು ತೆಗೆದುಕೊಂಡಿದ್ದರೆ, ವಿರಾಟ್ ಕೊಹ್ಲಿ 187 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Edited By : Vijay Kumar
PublicNext

PublicNext

15/12/2020 04:28 pm

Cinque Terre

24.26 K

Cinque Terre

2