ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್ ತಂಡದಲ್ಲಿ ನಿನ್ನಂತಹ ಹೃದಯವಂತನಿಲ್ಲ: ನೋವು ಹೊರಹಾಕಿದ ಕನೇರಿಯಾ

ಇಸ್ಲಾಮಾಬಾದ್: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಆಲ್‌ರೌಂಡರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಸರಣಿ ಶ್ರೇಷ್ಠಕ್ಕೆ ಭಾಜನರಾಗಿದ್ದರು. ಆದರೆ ಪಾಂಡ್ಯ ತಮ್ಮ ಟ್ರೋಫಿಯನ್ನು ವೇಗದ ಬೌಲರ್ ಟಿ.ನಟರಾಜನ್ ಅವರಿಗೆ ಹಸ್ತಾಂತರಿಸಿ ಕ್ರೀಡಾ ಸ್ಫೂರ್ತಿ ಮೆರೆದಿದ್ದರು.

ಪಾಂಡ್ಯ ಅವರ ಈ ನಿರ್ಧಾರಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಪಾಕಿಸ್ತಾನದ ಮಾಜಿ ಕ್ರಿಕೆಟರ್ ದಾನಿಶ್ ಕನೇರಿಯಾ ಹಾಡಿ ಹೊಗಳಿದ್ದಾರೆ.

ಹಾರ್ದಿಕ್ ಪಾಂಡ್ಯ ಹಾಗೂ ನಟರಾಜನ್ ಜೊತೆಗಿರುವ ಫೋಟೋವನ್ನು ಟ್ವೀಟ್ ಮಾಡಿರುವ ಕನೇರಿಯಾ, ''ಗ್ರೇಟ್ ಫೋಟೋ ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ. ಮ್ಯಾನ್ ಆಫ್ ದಿ ಸೀರಿಸ್ ಅನ್ನು ನಟರಾಜನ್‌ಗೆ ನೀಡಿ ಹಾರ್ದಿಕ್ ಪಾಂಡ್ಯ ಎಲ್ಲರ ಹೃದಯ ಗೆದ್ದಿದ್ದಾರೆ. ಈ ಮೂಲಕ ಪಾಂಡ್ಯ ನಟರಾಜನ್​ ಅವರಿಗೆ ಸ್ಫೂರ್ತಿ ತುಂಬಿದ್ದಾರೆ. ಆದರೆ ಇಂತಹ ದೊಡ್ಡ ಮನಸ್ಸು ಹೊಂದಿರುವ ಆಟಗಾರರು ಪಾಕಿಸ್ತಾನ ಕ್ರಿಕೆಟ್​ನಲ್ಲಿ ಇಲ್ಲ ಎಂಬುದು ಭಾವಿಸುತ್ತೇನೆ'' ಎಂದು ಬೇಸರ ಹೊರ ಹಾಕಿದ್ದಾರೆ.

ಪಾಕಿಸ್ತಾನದ ಕ್ರಿಕೆಟ್‌ ತಂಡ ಹಾಗೂ ಕೆಲ ಆಟಗಾರರ ಬಗ್ಗೆ ಈ ಹಿಂದೆ ಕನೇರಿಯಾ ಕಿಡಿಕಾರಿದ್ದು ಉಂಟು. ಹಿಂದೂ ಕ್ರಿಕೆಟರ್‌ ಎಂಬ ಕಾರಣಕ್ಕೆ ಕನೇರಿಯಾ ಅವರೊಂದಿಗೆ ಇತರ ಆಟಗಾರರು ಅಂತರ ಕಾಯ್ದುಕೊಳ್ಳುತ್ತಿದ್ದರು ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೋಯೆಬ್ ಅಖ್ತರ್ ಹೇಳಿದ್ದನ್ನು ಇಲ್ಲಿ ನೆನೆಯಬಹುದು.

Edited By : Vijay Kumar
PublicNext

PublicNext

14/12/2020 11:01 pm

Cinque Terre

53.3 K

Cinque Terre

1

ಸಂಬಂಧಿತ ಸುದ್ದಿ