ಸಿಡ್ನಿ: ಆಸ್ಟ್ರೇಲಿಯಾ ಎ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ಪೂರೈಸಲು ಕಾರಣವನ್ನು ಬಹಿರಂಗಪಡಿಸಿದ್ದಾರೆ.
'ನಾನು ಬ್ಯಾಟಿಂಗ್ ಮಾಡಲು ಬಂದಾಗ ಅನೇಕ ಓವರ್‌ಗಳು ಇದ್ದವು. ಹನುಮಾ ವಿಹಾರಿ ಮತ್ತು ನಾನು ಉತ್ತಮ ಪಾಲುದಾರಿಕೆಯನ್ನು ರೂಪಿಸಲು ಬಯಸಿದ್ದೆವು. ನಾನು ನಿಧಾನವಾಗಿ ಆತ್ಮವಿಶ್ವಾಸವನ್ನು ಗಳಿಸಿದೆ. ಆದರೆ ಶತಕದ ಸಮೀಪದಲ್ಲಿದ್ದಾಗ ಬೌಲರ್ ಎಸೆದ ಚಂಡು ನನ್ನ ಹೊಟ್ಟೆಗೆ ಬಿದ್ದಿತ್ತು. ಇದು ನನಗೆ ಕೋಪಕ್ಕೆ ಕಾರಣವಾಯಿತು. ಬಳಿಕ ಸ್ಫೋಟಕ ಬ್ಯಾಟಿಂಗ್‌ನಿಂದ 5 ಎಸೆತಗಳಲ್ಲಿ 22 ರನ್ ಚಚ್ಚಿದೆ'' ಎಂದು ಪಂತ್ ಹೇಳಿದ್ದಾರೆ.
PublicNext
14/12/2020 03:51 pm