ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಸುರೇಶ್ ರೈನಾ ಅವರು ವಿರಾಟ್ ಕೊಹ್ಲಿ ನೇತೃತ್ವದ ತಂಡದಲ್ಲಿರುವ ಕೊರತೆಯನ್ನು ತಿಳಿಸಿದ್ದಾರೆ.
ಟೀಂ ಇಂಡಿಯಾ ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯನ್ನು ಅಂತ್ಯಗೊಳಿಸಿದೆ. ಈ ಎರಡೂ ಸರಣಿಯಲ್ಲಿ ಹೆಚ್ಚಿನ ಚರ್ಚೆಗೆ ಒಳಗಾಗಿದ್ದು ಭಾರತ ತಂಡದಲ್ಲಿ ಆರನೇ ಬೌಲರ್‌ನ ಕೊರತೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಪ್ರತಿಕ್ರಿಯಿಸಿದ್ದಾರೆ.
ಪ್ರತಿ ತಂಡದ ನಾಯಕನಿಗೂ ನಾಲ್ಕರಿಂದ ಐದು ಓವರ್‌ಗಳ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯದ ಬ್ಯಾಟ್ಸ್‌ಮನ್ ಇರುವುದು ಪ್ರಮುಖವಾಗುತ್ತದೆ. ಹಾಗೆಯೇ ಬೌಲರ್ ಓರ್ವ ಬ್ಯಾಟಿಂಗ್ ಮೂಲಕ ನೆರವಾಗುವುದು ಕೂಡ ತಂಡದ ಪಾಲಿಗೆ ಬಹಳ ಸಹಕಾರಿ. ನಾವು ಹಳ್ಳಿಗಳಲ್ಲಿ ಆಡುತ್ತಿದ್ದಾಗ ಬ್ಯಾಟಿಂಗ್‌ನ ಜೊತೆಗೆ ಬೌಲಿಂಗ್ ಕೂಡ ಮಾಡಬೇಕಿತ್ತು. ಇಲ್ಲವಾದಲ್ಲಿ ತಂಡದಲ್ಲಿ ನಮಗೆ ಅವಕಾಶ ದೊರೆಯುತ್ತಿರಲಿಲ್ಲ. ನೀವು ಬೌಲಿಂಗ್ ಮಾಡುತ್ತೀರಿ ಎಂದಾಗದರೆ ನಾಯಕನಿಗೂ ಹೆಚ್ಚಿನ ಆಯ್ಕೆಗಳು ದೊರೆಯುತ್ತದೆ ಎಂದು ಸುರೈಶ್ ರೈನಾ ತಿಳಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಬೌಲಿಂಗ್ ಮಾಡುತ್ತಿದ್ದರು, ವೀರೇಂದ್ರ ಸೆಹ್ವಾಗ್ ಸಾಕಷ್ಟು ವಿಕೆಟ್ ಪಡೆದಿದ್ದಾರೆ. ಯುವರಾಜ್ ಸಿಂಗ್ ತಮ್ಮ ಬೌಲಿಂಗ್ ಸಾಮರ್ಥ್ಯದ ಮೂಲಕ ವಿಶ್ವಕಪ್‌ನಂತಾ ಶ್ರೇಷ್ಠ ಪ್ರಶಸ್ತಿ ಗೆಲ್ಲಲು ಕಾರಣರಾಗಿದ್ದರು ಎಂದು ರೈನಾ ನೆನೆದಿದ್ದಾರೆ.
PublicNext
09/12/2020 03:11 pm