ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಕೊನೆಯ ಟಿ20ಐ ಪಂದ್ಯದ ವೇಳೆ ಸ್ಲೋ ಓವರ್ ರೇಟ್‌ಗಾಗಿ ಕೊಹ್ಲಿ ಪಡೆಗೆ ಪಂದ್ಯದ ಸಂಭಾವನೆಯ ಶೇ. 20ರಷ್ಟು ದಂಡ ವಿಧಿಸಲಾಗಿದೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡವು ಸ್ಲೋ ಓವರ್ ಮಾಡಿದೆ. ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಟೀಂ ಇಂಡಿಯಾಗೆ ದಂಡ ಬೀಳುತ್ತಿರುವುದು ಇದು ಎರಡನೇ ಬಾರಿ. ಏಕದಿನ ಸರಣಿಯಲ್ಲೂ ಸ್ಲೋ ಓವರ್ ರೇಟ್‌ಗಾಗಿ ದಂಡ ವಿಧಿಸಲಾಗಿತ್ತು.
ಐಸಿಸಿ ನಿಮಯ ಏನು ಗೊತ್ತಾ?: ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಫೀಲ್ಡಿಂಗ್ ತಂಡ ಗಂಟೆಗೆ ಕನಿಷ್ಠ 15 ಓವರ್ ಮುಗಿಸಿರಬೇಕು. ಏಕದಿನ ಕ್ರಿಕೆಟ್‌ನಲ್ಲಿ 3.5 ಗಂಟೆಗಳಲ್ಲಿ 50 ಓವರ್ ಮುಗಿಸಿರಬೇಕು. ಟಿ20ನಲ್ಲೂ ಗಂಟೆಗೆ 14.28 ಓವರ್‌ನಂತೆ ಡ್ರಿಂಕ್ಸ್ ಬ್ರೇಕ್ ಸೇರಿ ಒಟ್ಟು 75 ನಿಮಿಷಗಳಲ್ಲಿ ಓವರ್ ಮುಗಿಸಲು ನಿಯಮವಿರುತ್ತದೆ.
PublicNext
09/12/2020 02:14 pm