ನವದೆಹಲಿ : 2002ರ ಭಾರತ ಜೂನಿಯರ್ ವಿಶ್ವಕಪ್ ತಂಡದ ಕ್ಯಾಪ್ಟನ್ ಆಗಿ ಅದೇ ವರ್ಷ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿ ಕ್ಷಿಪ್ರವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಟೀಂ ಇಂಡಿಯಾ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.
ಇಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಿರ್ಧಾರ ಪ್ರಕಟಿಸಿದ ಪಾರ್ಥಿವ್ '18 ವರ್ಷಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ಇಂದು ತೆರೆ ಎಳೆಯುವುದಾಗಿ' ತಿಳಿಸಿದ್ದಾರೆ.
ರಣಜಿಗೂ ಮೊದಲೇ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಪಾರ್ಥಿವ್, ತಮ್ಮ 17ನೇ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ದ ಪಂದ್ಯವಾಡಿದ್ದರು.
ಈ ಪಂದ್ಯದ ಮೂಲಕ ಪಾರ್ಥಿವ್ 'ಯಂಗೆಸ್ಟ್ ವಿಕೆಟ್ ಕೀಪರ್' (ವಿಶ್ವದ ಅತಿ ಕಿರಿಯ ವಯಸ್ಸಿನ ವಿಕೆಟ್ ಕೀಪರ್ ) ಎಂದು ಗುರುತಿಸಿಕೊಂಡಿದ್ದರು.
ಭಾರತದ ಪರ ಈ ಗುಜರಾತ್ ಆಟಗಾರ 25 ಟೆಸ್ಟ್, 38 ಏಕದಿನ, 2 ಟಿ20 ಪಂದ್ಯಗಳನ್ನು ಆಡಿದ್ದರು. ಭಾರತದ ಪರ 2018 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಪಂದ್ಯವಾಡಿದ್ದರು.
ಮಹೇಂದ್ರ ಸಿಂಗ್ ಧೋನಿ ಆಗಮಿಸುವ ಮುನ್ನ ವಿಕೆಟ್ ಕೀಪರ್ ಆಗಿ ಜವಾಬ್ದಾರಿ ನಿಭಾಯಿಸಿದ್ದರು. 25 ಟೆಸ್ಟ್ ಪಂದ್ಯಗಳಲ್ಲಿ 934, ಏಕದಿನದಲ್ಲಿ 736, ಟಿ20ಯಲ್ಲಿ 36 ರನ್ ಗಳಿಸಿದ್ದಾರೆ.
ಇನ್ನು ಐಪಿಎಲ್ ನಲ್ಲಿ 139 ಪಂದ್ಯವಾಡಿ 2848 ರನ್ ಗಳಿಸಿದ್ದಾರೆ.
PublicNext
09/12/2020 01:07 pm