ಜಿನೇವ: ಮೈಕೆಲ್ ಜಾಕ್ಸನ್ ಹೆಸರು ಕೇಳುತ್ತಲೇ ಎಲ್ಲರಿಗೂ ನೆನಪಾಗುವುದು ಬ್ರೇಕ್ ಡಾನ್ಸ್.
ಬ್ರೇಕ್ ಡಾನ್ಸ್ ತಾರೆ ಮೈಕೆಲ್ ಜಾಕ್ಸನ್ ಚಿತ್ರವಿಚಿತ್ರವಾಗಿ ಹೆಜ್ಜೆಗಳನ್ನು ಹಾಕುತ್ತ ಆತ ವಿಶ್ವವನ್ನೇ ದಂಗುಬಡಿಸಿದ್ದರು.
ಆ ನರ್ತನವೀಗ ಒಲಿಂಪಿಕ್ಸ್ ನಲ್ಲಿ ಕ್ರೀಡೆಯಾಗಿ ಸೇರ್ಪಡೆಗೊಳ್ಳುತ್ತಿದೆ. 2024ರಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಾರ್ಪಣೆ ಮಾಡಲಿದೆ.
ಪ್ರಸ್ತುತ ಒಲಿಂಪಿಕ್ಸ್ ವಿಶ್ವದಲ್ಲೇ ಬೃಹತ್ ಬಹು ಕ್ರೀಡಾಕೂಟ ಎನಿಸಿದ್ದರೂ,ಫುಟ್ ಬಾಲ್,ಕ್ರಿಕೆಟ್ ವಿಶ್ವಕಪ್ ಗಳಿಗೆ ಹೋಲಿಸಿದರೆ ಜನಪ್ರಿಯತೆ ಸ್ವಲ್ಪ ಕಡಿಮೆಯೇ.
ಅದನ್ನು ತುಂಬಲು ಐಒಸಿ ಬೇರೆ ಬೇರೆ ಯೋಚನೆ ಮಾಡಿದೆ. ಇನ್ನು ಸ್ಕೇಟಿಂಗ್, ಆರೋಹಣ (ಕೃತಕ ಪರ್ವತಾರೋಹಣ),ಸರ್ಫಿಂಗ್ (ನೀರಿನ ಭಾರೀ ಅಲೆಗಳಮೇಲೆ ಚಲಿಸುವುದು) ಇವೂ ಪ್ಯಾರಿಸ್ ನಲ್ಲಿ ಕ್ರೀಡೆಯಾಗಿ ಸೇರ್ಪಡೆಯಾಗಲಿವೆ.
PublicNext
09/12/2020 11:31 am