ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋಲಿನಿಂದ ಕಂಗೆಟ್ಟಿರುವ ಟೀಂ ಇಂಡಿಯಾ ಟಿ20ಯಲ್ಲಿ ಸೇಡು ತೀರಿಸಿಕೊಳ್ಳಲು ಭರ್ಜರಿ ಸಿದ್ಧತೆ ನಡೆಸಿಕೊಂಡಿದೆ.
ಸಿಡ್ನಿಯಲ್ಲಿ ನಡೆಯಲಿರುವ ಆಸೀಸ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಂದು ಗೆಲುವಿನತ್ತ ಚಿತ್ತ ಹರಿಸಿದೆ. ಇದಕ್ಕೆ ಆಸ್ಟ್ರೇಲಿಯಾ ಪ್ರತಿ ತಂತ್ರವನ್ನು ರೂಪಿಸಿದೆ.
ಶುಕ್ರವಾರದ ಟಿ20 ಪಂದ್ಯದಲ್ಲಿ ರವೀಂದ್ರ ಜಡೇಜಾ ಗಾಯಗೊಂಡು ಹೊರಬಿದ್ದಿರುವುದು ಟೀಂ ಇಂಡಿಯಾಗೆ ದೊಡ್ಡ ಹೊಡೆತವಾಗಿದೆ. ಜಡೇಜಾ ರೀತಿಯ ಆಲ್‌ರೌಂಡರ್ ತಂಡಕ್ಕೆ ಅಗತ್ಯವಾಗಿದೆ.
ಸಂಭಾವ್ಯ ಆಟಗಾರರು:
ಭಾರತ: ಶಿಖರ್ ಧವನ್, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಮನೀಷ್ ಪಾಂಡೆ/ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ/ಜಸ್‌ಪ್ರೀತ್ ಬುಮ್ರಾ, ಟಿ. ನಟರಾಜನ್.
ಆಸ್ಟ್ರೇಲಿಯ: ಆರನ್ ಫಿಂಚ್ (ನಾಯಕ)/ಮಾರ್ನಸ್ ಲಬುಶೇನ್, ಡಿ’ಆರ್ಸಿ ಶಾರ್ಟ್/ಅಲೆಕ್ಸ್ ಕ್ಯಾರಿ, ಮ್ಯಾಥ್ಯೂ ವೇಡ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಸಸ್ ಹೆನ್ರಿಕ್ಸ್, ಸೀನ್ ಅಬೋಟ್/ಆ್ಯಂಡ್ರ್ಯು ಟೈ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಆ್ಯಡಂ ಝಂಪ, ಜೋಶ್ ಹ್ಯಾಝಲ್‌ವುಡ್.
PublicNext
06/12/2020 08:59 am