ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs AUS T20 : ಭಾರತಕ್ಕೆ 11 ರನ್ ಗಳ ಜಯ

ಕ್ಯಾನ್ ಬೆರ : ಇಲ್ಲಿನ ಮನುಕಾ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತ 11 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಬ್ಯಾಟಿಂಗ್ - ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಕೊಹ್ಲಿ ಪಡೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಇತ್ತ ಫಿಂಚ್ ಪಡೆ ಟಿ-20 ಯಲ್ಲಿ ಭಾರತ ವಿರುದ್ಧ ತನ್ನ ಹಳೆಯ ಕೆಟ್ಟ ದಾಖಲೆ ಮುಂದುವರೆಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿತು.

ಆರಂಭದಲ್ಲೇ ಶಿಖರ್ ಧವನ್ ಕೇವಲ 1 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು. ನಾಯಕ ವಿರಾಟ್ ಕೊಹ್ಲಿ(9) ಕೆ. ಎಲ್ ರಾಹುಲ್ ಜೊತೆಯಾದ ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ರಾಹುಲ್ ಅರ್ಧಶತಕ ಬಾರಿಸಿದರೆ, 15 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್ ಬಾರಸಿದ ಸಂಜು 23 ರನ್ ಗಳಿಸಿ ಔಟ್ ಆದರು.

ಮನೀಶ್ ಪಾಂಡೆ ಆಟ ಕೇವಲ 2 ರನ್ ಗೆ ಅಂತ್ಯವಾಯಿತು.

ರಾಹುಲ್ 40 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ 51 ರನ್ ಗಳಿಸಿದರೆ ಹಾರ್ದಿಕ್ ಪಾಂಡ್ಯ 16 ರನ್ ಗೆ ಸುಸ್ತಾದರು.

ಅಂತಿಮ ಹಂತದಲ್ಲಿ ಜಡೇಜಾ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಕೇವಲ 23 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 44 ರನ್ ಚಚ್ಚಿದರು.

ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.

ಭಾರತ ನೀಡಿದ್ದ 162 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಂಡಿತು.

ಆ್ಯರೋನ್ ಫಿಂಚ್ ಹಾಗೂ ಡಾರ್ಸಿ ಶಾರ್ಟ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಮೊದಲ ವಿಕೆಟ್ ಗೆ ಈ ಜೋಡಿ 56 ರನ್ ಗಳ ಜೊತೆಯಾಟ ಆಡಿತು.

26 ಎಸೆತಗಳಲ್ಲಿ 35 ರನ್ ಗಳಿಸಿದ್ದ ಫಿಂಚ್ ಚಹಾಲ್ ಗೆ ವಿಕೆಟ್ ಒಪ್ಪಿಸಿದರು.

ಸ್ಟೀವ್ ಸ್ಮಿತ್ 12 ರನ್ ಗಳಿಸಿರುವಾಗ ಸಂಜು ಸ್ಯಾಮ್ಸನ್ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರೆ, ನಟರಾಜನ್ ಬೌಲಿಂಗ್ ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್(2) ಎಲ್ಬಿ ಬಲೆಗೆ ಸಿಲುಕಿದರು.

ಡಾರ್ಸಿ ಶಾರ್ಟ್ ಕೂಡ 38 ಎಸೆತಗಳಲ್ಲಿ 34 ರನ್ ಗಳಿಸಿ ನಿರ್ಗಮಿಸಿದರು.

ಮ್ಯಾಥ್ಯೂ ವೇಡ್ ಆಟ 7 ರನ್ ಗೆ ಅಂತ್ಯವಾಯಿತು. ಮೊಯ್ ಸೆಸ್ ಹೆನ್ರಿಕ್ಯೂಸ್ 30 ರನ್ ಗೆ ಅಂತ್ಯವಾಯಿತು.

ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು.

Edited By : Nirmala Aralikatti
PublicNext

PublicNext

04/12/2020 05:43 pm

Cinque Terre

134.93 K

Cinque Terre

4

ಸಂಬಂಧಿತ ಸುದ್ದಿ