ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs AUS T20 : ಆಸೀಸ್ ಗೆ 162 ರನ್ ಗುರಿ ನೀಡಿದ ಭಾರತ

ಕ್ಯಾನ್ ಬೆರಾ: ಇಂದು ಭಾರತ-ಆಸ್ಟ್ರೇಲಿಯಾ ನಡುವೆ ಮೊದಲ ಚುಟುಕು ಕ್ರಿಕೆಟ್ ಕದನ ಶುರುವಾಗಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 161 ರನ್ ಕಲೆ ಹಾಕಿ ಆಸೀಸ್ ಗೆ 162 ರನ್ ಗುರಿ ನೀಡಿದೆ.

ಮನುಕಾ ಓವಲ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ ಟೀಮ್ ಇಂಡಿಯಾ, ಬಲಗೈ ಆರಂಭಿಕ ಕೆಎಲ್ ರಾಹುಲ್ (51) ಅರ್ಧಶತಕ ಹಾಗೂ ಕೊನೆಯ ಹಂತದಲ್ಲಿ ರವೀಂದ್ರ ಜಡೇಜ (44) ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 161 ರನ್ ಗಳ ಕಲೆಹಾಖಿದೆ.

ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಶಿಖರ್ ಧವನ್ ಕೇವಲ ಒಂದು ರನ್ ಗಳಿಸಿ ನಿರಾಸೆ ಮೂಡಿಸಿದರು.

ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ದಾಳಿಯಲ್ಲಿ ವಿಕೆಟ್ ಒಪ್ಪಿಸಿದ ನಾಯಕ ವಿರಾಟ್ ಕೊಹ್ಲಿ ಕೇವರ್ 9 ರನ್ ಮಾತ್ರ ನೀಡಿದ್ದಾರೆ.

ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಹುಲ್ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ರಾಹುಲ್-ಸಂಜು ಜೋಡಿ ಕ್ರೀಸಿನಲ್ಲಿದ್ದಾಗ ಉತ್ತಮ ಮೊತ್ತ ಪೇರಿಸುವ ಭರವಸೆ ಮೂಡಿಸಿದರು.

ಆದರೆ ಈ ಜೋಡಿಯನ್ನು ಬೇರ್ಪಡಿಸಿದ ಮೊಯಿಸೆಸ್ ಹೆನ್ರಿಕ್ಸ್ ಆಘಾತ ನೀಡಿದರು.

ಸಂಜು ಸ್ಯಾಮ್ಸನ್ 15 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 23 ರನ್ ಗಳಿಸಿದರು. ಇದಾದ ಬೆನ್ನಲ್ಲೇ ಮನೀಷ್ ಪಾಂಡೆ (2) ಅವರಿಗೆ ಆಯಡಂ ಜಂಪಾ ಪೆವಿಲಿಯನ್ ಹಾದಿ ತೋರಿಸಿದರು.

ಅತ್ತ ಉತ್ತಮವಾಗಿ ಆಡುತ್ತಿದ್ದ ರಾಹುಲ್ ಪತನದೊಂದಿಗೆ 13.5 ಓವರ್ ಗಳಲ್ಲೇ 92 ರನ್ನಿಗೆ ಐದು ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತು.

40 ಎಸೆತಗಳನ್ನು ಎದುರಿಸಿದ ರಾಹುಲ್ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು.

15 ಎಸೆತಗಳನ್ನು ಎದುರಿಸಿದ ಹಾರ್ದಿಕ್ ಪಾಂಡ್ಯ 16 ರನ್ ಗಳಿಸಿ ಔಟಾದರು.

ಜೋಶ್ ಹ್ಯಾಜಲ್ವುಡ್ ಎಸೆದ ಇನ್ನಿಂಗ್ಸ್ 19ನೇ ಓವರ್ ನಲ್ಲಿ ಮೂರು ಬೌಂಡರಿ ಹಾಗೂ ಸಿಕ್ಸರ್ ಸೇರಿದಂತೆ 23 ರನ್ ಕಬಳಿಸಿದ ಜಡೇಜ ಗಮನ ಸೆಳೆದರು.

ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 161 ಕಲೆ ಹಾಕಿದೆ.

Edited By : Nirmala Aralikatti
PublicNext

PublicNext

04/12/2020 04:22 pm

Cinque Terre

54.24 K

Cinque Terre

0

ಸಂಬಂಧಿತ ಸುದ್ದಿ