ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

India vs Australia : ನಾಳೆ ಮೊದಲನೇ ಟಿ20 ಪಂದ್ಯ, ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ!

ಕ್ಯಾನ್ಬೆರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ನಾಯಕತ್ವ ಭಾರತ ತಂಡ ಶುಕ್ರವಾರ ಮೂರು ಪಂದ್ಯಗಳ ಟಿ20 ಸರಣಿಯ ಮೊದಲನೇ ಹಣಾಹಣಿಯಲ್ಲಿ ಆರೋನ್ ಫಿಂಚ್ ಬಳಗವನ್ನು ಎದುರಿಸಲು ಸಜ್ಜಾಗುತ್ತಿದೆ.

ಬುಧವಾರ ಮುಕ್ತಾಯವಾಗಿದ್ದ ಓಡಿಐ ಸರಣಿಯಲ್ಲಿ ಭಾರತ, ಐದು ಬೌಲರ್ಗಳಿಂದ ಸಂಯೋಜನೆಯಲ್ಲಿ ಸಮಸ್ಯೆಯನ್ನು ಎದುರಿಸಿತ್ತು.

ಆರಂಭಿಕ ಎರಡು ಪಂದ್ಯಗಳಲ್ಲಿ ಬೌಲಿಂಗ್ ವೈಫಲ್ಯದಿಂದ ಸೋತಿದ್ದ ಕೊಹ್ಲಿ ಪಡೆ, ಅಂತಿಮ ಪಂದ್ಯದಲ್ಲಿ ತಂಡ ಲಯಕ್ಕೆ ಮರಳಿತು ಹಾಗೂ 13 ರನ್ ಗಳಿಂದ ಮೊದಲ ಗೆಲುವು ದಾಖಲಿಸಿತು.

ಮನುಕಾ ಓವಲ್ ಅಷ್ಟೊಂದು ದೊಡ್ಡ ಅಂಗಳವಾಗಿರುವುದರಿಂದ ಟಿ20 ಪಂದ್ಯದಲ್ಲಿ ಹೆಚ್ಚು ರನ್ ಗಳನ್ನು ಗಳಿಸಲು ಸಾಧ್ಯವಾಗುವುದಿಲ್ಲ ಎಂಬುದು ಹಿಂದಿನ ಪಂದ್ಯಗಳಿಂದ ಅರಿವಾಗುತ್ತದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:

ಆಸ್ಟ್ರೇಲಿಯಾ: ಆರೋನ್ ಫಿಂಚ್(ನಾಯಕ), ಡಿ'ಆರ್ಸಿ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್/ ಕ್ಯಾಮೆರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್ವೆಲ್, ಅಲೆಕ್ಸ್ ಕೇರಿ(ವಿ.ಕೀ), ಆಷ್ಟನ್ ಅಗರ್, ಶಾನ್ ಅಬಾಟ್, ಮಿಚೆಲ್ ಸ್ಟಾರ್ಕ್. ಡೇನಿಯಲ್ ಸ್ಯಾಮ್ಸ್, ಜಾಶ್ ಹೇಜಲ್ವುಡ್, ಆಡಂ ಝಾಂಪ

ಭಾರತ:

ಶಿಖರ್ ಧವನ್, ಕೆ.ಎಲ್ ರಾಹುಲ್(ವಿ.ಕೀ), ವಿರಾಟ್ ಕೊಹ್ಲಿ(ನಾಯಕ), ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹರ್/ಟಿ ನಟರಾಜನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಹಲ್, ಜಸ್ಪ್ರಿತ್ ಬುಮ್ರಾ

ಪಂದ್ಯದ ವಿವರ

ಭಾರತ vs ಆಸ್ಟ್ರೇಲಿಯಾ

ದಿನಾಂಕ: ಡಿ.4 2020 (ಶುಕ್ರವಾರ)

ಸಮಯ: ಮಧ್ಯಾಹ್ನ 01:40 (ಭಾರತೀಯ ಕಾಲಮಾನ)

ಸ್ಥಳ: ಮನುಕಾ ಓವಲ್, ಕ್ಯಾನ್ಬೆರಾ

Edited By : Nirmala Aralikatti
PublicNext

PublicNext

03/12/2020 07:47 pm

Cinque Terre

39.34 K

Cinque Terre

1

ಸಂಬಂಧಿತ ಸುದ್ದಿ