ಕ್ಯಾನ್ಬೆರಾ: ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಟಿ.ನಟರಾಜನ್ ಮತ್ತು ಆಸೀಸ್ ಪರ ಕ್ಯಾಮರೂನ್ ಗ್ರೀನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಸ್ಮರಣೀಯ ಪಂದ್ಯದಲ್ಲಿ ಆತಂಕದಲ್ಲಿದ್ದ ಕ್ಯಾಮರೂನ್ ಗ್ರೀನ್ ಅವರಿಗೆ ಭಾರತದ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ ಸ್ಫೂರ್ತಿ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಕ್ಯಾರೂನ್ ಗ್ರೀನ್, 'ನೀನು ನರ್ವಸ್ ಆಗಿದ್ದೀಯಾ ಎಂದು ಕೆ.ಎಲ್.ರಾಹುಲ್ ಕೇಳಿದರು. ಅದಕ್ಕೆ ನಾನು ಸ್ವಲ್ಪ ನರ್ವಸ್ ಆಗಿದ್ದೇನೆ ಎಂದು ಉತ್ತರಿಸಿದ್ದೆ. ಅದಕ್ಕೆ ಅವರು ಸ್ಫೂರ್ತಿಯ ಮಾತುಗಳ ಮೂಲಕ ನನಗೆ ಪ್ರೇರಣೆ ನೀಡಿದರು. ಉತ್ತಮವಾಗಿ ಆಡು ಯಂಗ್‌ಸ್ಟರ್ ಎಂದು ರಾಹುಲ್ ಉತ್ಸಾಹ ತುಂಬಿದರು. ಅವರ ಮಾತಿನಿಂದ ನಾನು ಪ್ರೇರಣೆ ಪಡೆದುಕೊಂಡೆ' ಎಂದು ಹೇಳಿದ್ದಾರೆ.
ಈ ಮೂಲಕ ಕನ್ನಡಿಗ ಕೆ.ಎಲ್.ರಾಹುಲ್ ಅವರಿಗೆ ಕ್ಯಾರೂನ್ ಗ್ರೀನ್ ವಿಶೇಷ ಧನ್ಯವಾದ ತಿಳಿಸಿದ್ದಾರೆ.
PublicNext
03/12/2020 04:16 pm