ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಅಮೋಘ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 13 ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಈ ಮೂಲಕ ಕ್ಲೀನ್‌ಸ್ವೀಪ್ ಮುಖಭಂಗವನ್ನು ತಪ್ಪಿಸಿಕೊಂಡಿದೆ.
ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಮುಕ್ತಕಂಠವಾಗಿ ಪ್ರಶಂಸಿಸಿದ್ದಾರೆ. 'ಪ್ರಸ್ತುತ ಸಾಗುತ್ತಿರುವ ಆಸೀಸ್ ಪ್ರವಾಸದಲ್ಲಿ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ನಮಗೆ ದೊಡ್ಡ ಆಸ್ತಿಯಾಗಬಹುದು' ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸೌರವ್ ಗಂಗೂಲಿ, 'ಸರಣಿ ಸೋಲಿನ ಹೊರತಾಗಿಯೂ ಭಾರತ ಉತ್ತಮ ಗೆಲುವು ದಾಖಲಿಸಿದೆ. ಇದು ಸುದೀರ್ಘ ಪ್ರವಾಸವಾಗಿದ್ದು, ಪರಿಸ್ಥಿತಿ ನಮ್ಮ ಪರ ವಾಲುವ ನಿರೀಕ್ಷೆಯಿದೆ. ಅತ್ಯಂತ ಕಠಿಣ ಸ್ಥಾನಗಳಲ್ಲಿ ಆಡವಾಡುತ್ತಿರುವ ಜಡೇಜಾ ಹಾಗೂ ಪಾಂಡ್ಯ ತಂಡಕ್ಕೆ ದೊಡ್ಡ ಆಸ್ತಿಯಾಗಬಹುದು' ಎಂದು ಬರೆದುಕೊಂಡಿದ್ದಾರೆ.
PublicNext
03/12/2020 02:54 pm