ನವದೆಹಲಿ: ಬಾಲಿವುಡ್‌ನ ಖ್ಯಾತ ನಟ ಶಾರೂಕ್ ಖಾನ್ ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಫ್ರಾಂಚೈಸಿಗಳ ಮಾಲೀಕತ್ವ ಹೊಂದಿ ಸೈ ಎನಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಕ್ರಿಕೆಟ್ ಲೀಗ್ ತಂಡದ ಮಾಲೀಕತ್ವ ವಹಿಸಿಕೊಳ್ಳಲಿದ್ದಾರೆ.
ಅಮೆರಿಕದ ಕ್ರಿಕೆಟ್‌ನ ಲೀಗ್‌ನಲ್ಲಿ ಫ್ರಾಂಚೈಸಿಯೊಂದನ್ನು ಶಾರೂಕ್ ಖಾನ್ ಖರೀದಿಸಲಿದ್ದಾರೆ. ಯುಎಸ್‌ಎಯ ಈ ಕ್ರಿಕೆಟ್ ಲೀಗ್‌ನಲ್ಲಿ ಆರು ತಂಡಗಳು ಪಾಲ್ಗೊಳ್ಳಲಿದೆ. ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ವಾಶಿಂಗ್ಟನ್ ಡಿಸಿ, ಶಿಕಾಗೋ, ಡಲ್ಲಾಸ್ ಹಾಗೂ ಲಾಸ್ ಏಂಜಲೀಸ್ ನಗರಗಳನ್ನು ಪ್ರತಿನಿಧಿಸುವ ತಂಡಗಳು ಈ ಲೀಗ್‌ನಲ್ಲಿ ಇರಲಿದೆ. ಇದರಲ್ಲಿ ಲಾಸ್ ಏಂಜಲೀಸ್ ನಗರವನ್ನು ಪ್ರತಿನಿಧೀಸುವ ತಂಡದ ಮಾಲೀಕತ್ವವನ್ನು ಶಾರೂಕ್ ಖಾನ್ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
PublicNext
01/12/2020 02:53 pm