ಸಿಡ್ನಿ: ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಮಧ್ಯೆ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದ ವೇಳೆ ಭಾರತೀಯ ಯುವಕನೋರ್ವ ಆಸೀಸ್ ಗೆಳತಿಗೆ ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತದ ಇನ್ನಿಂಗ್ಸ್‌ನ 20ನೇ ಓವರ್‌ನ ನಂತರ ಟೀಂ ಇಂಡಿಯಾ ಅಭಿಮಾನಿ ಕುಳಿತಿದ್ದ ಜಾಗದಲ್ಲಿಯೇ ಮೊಣಕಾಲೂರಿ ಆಸ್ಟ್ರೇಲಿಯಾದ ಗೆಳತಿಗೆ ಪ್ರಪೋಸ್ ಮಾಡಿದ್ದಾರೆ. ಯುವಕನ ಪ್ರೀತಿಗೆ ಸಮ್ಮತಿ ನೀಡಿದ ಗೆಳತಿ ಆತನಿಗೆ ಮುತ್ತು ನೀಡಿದಳು. ಈ ದೃಶ್ಯವನ್ನು ನೋಡಿದ ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮೈದಾನದಿಂದಲೇ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು.
PublicNext
29/11/2020 04:35 pm