ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸಿಕ್ಸರ್, ಬೌಂಡರಿ ಚಚ್ಚಿದ ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಭಾರತದ ಪರ ದಾಖಲೆ ಬರೆದಿದ್ದಾರೆ.
ಹಾರ್ದಿಕ್ ಪಾಂಡ್ಯ 857 ಎಸೆತಗಳಲ್ಲಿ ಒಂದು ಸಾವಿರ ರನ್ ಪೂರ್ಣಗೊಳಿಸಿದ ಸಾಧನೆ ಮಾಡಿದ್ದಾರೆ. ಈ ಪಂದ್ಯಕ್ಕೂ ಮುನ್ನ 54 ಏಕದಿನದ 38 ಇನ್ನಿಂಗ್ಸ್ ಆಡಿದ್ದ ಪಾಂಡ್ಯ 957 ರನ್ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ 43 ರನ್ ಚಚ್ಚುವ ಮೂಲಕ ಒಂದು ಸಾವಿರ ರನ್‌ಗಳ ಗಡಿಯನ್ನು ದಾಟಿದರು. ಏಕದಿನ ಪಂದ್ಯದಲ್ಲಿ ಭಾರತದ ಪರ ಅತಿ ವೇಗವಾಗಿ ಒಂದು ಸಾವಿರ ರನ್ ಪೂರೈಸಿದ ಆಟಗಾರರಲ್ಲಿ ಪಾಂಡ್ಯ ಅಗ್ರಸ್ಥಾನದಲ್ಲಿದ್ದಾರೆ.
ಕಡಿಮೆ ಎಸೆತದಲ್ಲಿ ಸಾವಿರ ರನ್ ಪೂರ್ಣಗೊಳಿಸಿದ ವಿಶ್ವದ ಆಟಗಾರರ ಪೈಕಿ ವೆಸ್ಟ್‌ಇಂಡೀಸ್ ಆಟಗಾರ ಆಂಡ್ರೆ ರಸೆಲ್ ಮೊದಲ ಸ್ಥಾನದಲ್ಲಿದ್ದಾರೆ. ಪಾಂಡ್ಯ 5ನೇ ಸ್ಥಾನದಲ್ಲಿದ್ದಾರೆ. ರಸೆಲ್ 767 ಎಸೆತದಲ್ಲಿ ಸಾವಿರ ರನ್ ಹೊಡೆದಿದ್ದರು. ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಲ್ಯೂಕ್ ರೊಂಚಿ (807 ಎಸೆತ), ಪಾಕಿಸ್ತಾನ ಶಾಹಿದ್ ಅಫ್ರಿದಿ(834 ಎಸೆತ), ನ್ಯೂಜಿಲೆಂಡಿನ ಕೊರೆ ಆಂಡರ್‌ಸನ್(854 ಎಸೆತ), ಹಾರ್ದಿಕ್ ಪಾಂಡ್ಯ(857), ಇಂಗ್ಲೆಂಡಿನ ಜೋಸ್ ಬಟ್ಲರ್(860 ಎಸೆತ) ಇದ್ದಾರೆ.
ಆಸೀಸ್ ವಿರುದ್ಧದ ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 76 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸೇರಿದಂತೆ 90 ರನ್ ದಾಖಲಿಸಿದರು.
PublicNext
27/11/2020 06:58 pm