ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿರಾಟ್, ಕೆಎಲ್, ಅಯ್ಯರ್ ಬ್ಯಾಟಿಂಗ್ ವೈಫಲ್ಯ- 66 ರನ್‌ಗಳಿಂದ ಗೆದ್ದು ಬೀಗಿದ ಆಸೀಸ್ ಪಡೆ

ಸಿಡ್ನಿ: ಭಾರತ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 66 ರನ್‌ಗಳಿಂದ ಗೆದ್ದು ಬೀಗುವ ಮೂಲಕ ಆಸ್ಟ್ರೇಲಿಯಾ ಶುಭಾರಂಭ ಮಾಡಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 374 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ವೈಫಲ್ಯದಿಂದ ಸೋಲು ತುತ್ತಾಯಿತು. ನಿಗದಿತ 50 ಓವರ್‌ಗಳಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಪಡೆಯು 8 ವಿಕೆಟ್‌ ನಷ್ಟಕ್ಕೆ 308 ರನ್‌ ಗಳಿಸಲು ಶಕ್ತವಾಯಿತು.

ಭಾರತ ಪರ ಹಾರ್ದಿಕ್ ಪಾಂಡ್ಯ 90 ರನ್ (76 ಎಸೆತ, 7 ಬೌಂಡರಿ, 4 ಸಿಕ್ಸರ್), ಶಿಖರ್ ಧವನ್ 74 ರನ್ (86 ಎಸೆತ, 10 ಬೌಂಡರಿ), ರವೀಂದ್ರ ಜಡೇಜಾ 25 ರನ್ (37 ಎಸೆತ, 1 ಸಿಕ್ಸ್‌), ನವದೀಪ್ ಸೈನಿ 29 ರನ್ (35 ಎಸೆತ, 1 ಬೌಂಡರಿ, 1 ಸಿಕ್ಸ್‌) ಗಳಿಸಿದರು.

ಇದಕ್ಕೂ ಮುನ್ನ ನಾಯಕ ಆ್ಯರೋನ್ ಫಿಂಚ್ ಹಾಗೂ ಸ್ಟೀವ್ ಸ್ಮಿತ್ ಅವರ ಮನಮೋಹಕ ಶತಕ ಹಾಗೂ ಡೇವಿಡ್ ವಾರ್ನರ್ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 374 ರನ್ ಬಾರಿಸಿತ್ತು.

Edited By : Vijay Kumar
PublicNext

PublicNext

27/11/2020 05:47 pm

Cinque Terre

78.2 K

Cinque Terre

1

ಸಂಬಂಧಿತ ಸುದ್ದಿ