ಬ್ಯೂನಸ್: ಗ್ರೇಟ್ ಅರ್ಜೆಂಟೀನಾದ ಫುಟ್ಬಾಲ್ ಮಾಂತ್ರಿಕ ಆಟಗಾರ- ದಂತಕತೆ ಡಿಗೋ ಮರಡೋನಾ ಅಂತ್ಯ ಸಂಸ್ಕಾರ ಬ್ಯೂನಸ್ ಬಳಿಯ ಬೆಲ್ಲಾ ವಿಸ್ಟಾ ವಸತಿ ಪ್ರದೇಶದ ಸ್ಮಶಾನದಲ್ಲಿ ನೆರವೇರಿಸಲಾಗಿದೆ.
ಮರಡೋನ ಹೆತ್ತವರನ್ನು ಅಲ್ಲಿಯೇ ಸಮಾಧಿ ಮಾಡಲಾಗಿತ್ತು. ಅದಕ್ಕಾಗಿಯೇ ಮರಡೋನಾ ಅಂತ್ಯ ಸಂಸ್ಕಾರಕ್ಕಾಗಿ ಈ ಸ್ಮಶಾನವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಮರಡನೋ ಬುಧವಾರ ತಮ್ಮ 60 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಸಾವಿಗೆ ಎರಡು ವಾರಗಳ ಮೊದಲು ಮರಡೋನಾ ಅವರನ್ನು ಮೆದುಳಿನ ಸರ್ಜರಿಗೆ ಒಳಪಡಿಸಲಾಗಿತ್ತು. ಕೆಲ ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ವಿದಾಯ ಸಮಾರಂಭದ ಸಮಯದಲ್ಲಿ ಘರ್ಷಣೆಗಳು ಮತ್ತು ಗಲಭೆಗೆ ಕಾರಣವಾಗಿ ಒಂಬತ್ತು ಜನರನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಹಲವರು ಗಾಯಗೊಂಡಿದ್ದಾರೆ.
PublicNext
27/11/2020 10:41 am